ಮಡಿಕೇರಿ: ರಸ್ತೆಯಿಂದ ಮನೆಯಂಗಳಕ್ಕೆ ಉರುಳಿ ಬಿದ್ದ ಕಾರು

Update: 2023-11-05 14:11 GMT

ಮಡಿಕೇರಿ ನ.5:ಪ್ರವಾಸಿಗರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯಂಗಳಕ್ಕೆ ಉರುಳಿ ಬಿದ್ದ ಘಟನೆ ಮಡಿಕೇರಿ-ಮೇಕೇರಿ ರಸ್ತೆಯ 1ನೇ ಮೈಲ್‍ನಲ್ಲಿ ನಡೆದಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತಮಿಳುನಾಡು ನೋಂದಣಿ ಹೊಂದಿದ ಕಾರಿನಲ್ಲಿ ಮೂವರು ಪ್ರವಾಸಿಗರು ಮೇಕೇರಿ ಬಳಿಯ 1ನೇ ಮೈಲ್‍ನಲ್ಲಿರುವ ಹೋಂ ಸ್ಟೇ ಒಂದಕ್ಕೆ ಆಗಮಿಸಿದ್ದರು. ಹೋಂಸ್ಟೇಗೆ ತೆರಳುವ ಏರು ರಸ್ತೆಯಲ್ಲಿ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ರಸ್ತೆಯ ಪಕ್ಕದಲ್ಲೇ ಇರುವ ದಿ.ಸೈಯದ್ ಲತೀಫ್ ಎಂಬುವವರ ಮನೆಯ ಅಂಗಳಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News