ಸಚಿವ ಝಮೀರ್ ಅಹಮದ್ ಖಾನ್ ಅವರಿಗೆ ಜೈಪುರದಲ್ಲಿ ಸನ್ಮಾನ
ಬೆಂಗಳೂರು:ರಾಜಸ್ಥಾನ ಪ್ರವಾಸದಲ್ಲಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಜೈಪುರದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಸ್ಥಳೀಯ ಕಾಂಗ್ರೆಸ್ ಶಾಸಕರು ಹಾಗೂ ಹಜ್ ಕಮಿಟಿ ಅಧ್ಯಕ್ಷ ಅಮೀನ್ ಕಾಗಜಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ಖಾನ್ ಅವರಿಗೆ ಸಂಪ್ರದಾಯಿಕ ರಾಜಸ್ಥಾನಿ ಶೈಲಿಯಲ್ಲಿ ಗೌರವಿಸಲಾಯಿತು.
ಶಾಸಕ ಅಮೀನ್ ಕಾಗಜಿ ಮಾತನಾಡಿ, ಕರ್ನಾಟಕ ದಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.ಕರ್ನಾಟಕ ಅಷ್ಟೇ ಅಲ್ಲದೆ ರಾಜಸ್ಥಾನ, ತೆಲಂಗಾ ಣ ಸೇರಿ ದೇಶದ ಎಲ್ಲೆಡೆ ವರ್ಚಸ್ಸು ಹೊಂದಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಒಳಿತಿಗಾಗಿ ದೇಶದಲ್ಲೇ ಮಾದರಿ ಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ವೈಯಕ್ತಿಕ ವೆಚ್ಚದಲ್ಲಿ ಒಂದೂವರೆ ಸಾವಿರ ಮಂದಿಗೆ ಉಮ್ರಾ ಪ್ರವಾಸ, ಹಜ್ ಯಾತ್ರಿಕರಿಗೆ ಪ್ರತಿ ವರ್ಷ ಸೇವೆ ಮಾಡುವ ಮೂಲಕ ದೇವರ ಕೃಪೆಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಶಿಕ್ಷಣ ಹಾಗೂ ಆರೋಗ್ಯ ವಿಚಾರದಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸುವ ಜಮೀರ್ ಅಹಮದ್ ಅವರದು ಮಾತೃ ಹೃದಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ನನ್ನ ಮೇಲೆ ಪ್ರೀತಿ ಇಟ್ಟು ನೀವು ಮಾಡಿದ ಸನ್ಮಾನದಿಂದ ನನಗೆ ಹೃದಯ ತುಂಬಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ವಾಗಿ ಕೆಲಸ ಮಾಡುತ್ತಿದ್ದು, ಅದೇ ರೀತಿ ರಾಜಸ್ಥಾನದಲ್ಲೂ ಕಾಂಗ್ರೆಸ್ ಸರ್ಕಾರವೂ ಬಡವರ ಪರ ಕೆಲಸ ಮಾಡುತ್ತಿದ್ದು, ದೇಶದ ಎಲ್ಲೆಡೆ ಈಗ ಕಾಂಗ್ರೆಸ್ ಪರ ಒಲವು ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜಸ್ಥಾನ ವಕೀಲರ ಸಂಘದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.
ಲಖನೌ ಕಚೋಚ್ಚಾ ಶರೀಫ್ ದರ್ಗಾ ದ ಸೂಫಿ ಧರ್ಮ ಗುರು ಕಾಸಿಂ ಅಶ್ರಫ್ ಜಿಲಾನಿ, ಬಿಹಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮೊಹಮ್ಮದ್ ಜಮಾ, ಮಾಜಿ ಸಚಿವ ಇಮಾಮುದ್ದಿನ್, ಕರ್ನಾಟಕ ದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಇಸ್ಮಾಯಿಲ್ ಜಬಿವುಲ್ಲಾ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಶಕೀಲ್ ನವಾಜ್, ಕಾಂಗ್ರೆಸ್ ಮುಖಂಡ ಮುಜಾಯಿದ್ದೀನ್, ನಟ ಅಕ್ಬರ್ ಬಿನ್ ತಬರ್ ಸೇರಿದಂತೆ ಸ್ಥಳೀಯ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿಶೇಷ ಪ್ರಾರ್ಥನೆ
ಇದಕ್ಕೂ ಮುನ್ನ ಸಚಿವ ಜಮೀರ್ ಅಹಮದ್ ಖಾನ್ ಅವರು ಶುಕ್ರವಾರ ಮಧ್ಯಾಹ್ನ ಅಜ್ಮಿರ್ ನ ಕ್ವಾಜಾ ಮೊಯಿನುದ್ದಿನ್ ದರ್ಗಾ ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.