ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಶಾಸಕ ಮುನಿರತ್ನ ಏಕಾಂಗಿ ಧರಣಿ

Update: 2023-10-11 09:57 GMT

ಬೆಂಗಳೂರು:  ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬುಧವಾರ ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಸಂಸದ ಡಿ.ಕೆ ಸುರೇಶ್‌ ಅವರ ಭಾವಚಿತ್ರವುಳ್ಳ ಪೋಸ್ಟರ್‌ ಹಿಡಿದು ಧರಣಿ ನಡೆಸಿದರು.

ಮುನಿರತ್ನ ಜೊತೆ ಪ್ರತಿಭಟನೆ ನಡೆಸಲು ಅವರ ಬೆಂಬಲಿಗರು ಆಗಮಿಸಿದಾಗ,  ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡರು. ಆ ಬಳಿಕ ಮುನಿರತ್ನ ಅವರು ಏಕಾಂಗಿಯಾಗಿಯೇ ಪ್ರತಿಭಟನೆ ಮುಂದುವರಿಸಿದರು.

ʼರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ನೀಡಬೇಕಿದ್ದ ಅನುದಾನ ಕಡಿತಗೊಳಿಸಿ, ಯಶವಂತಪುರ, ಬ್ಯಾಟರಾಯನಪುರ ಸೇರಿ ಬೇರೆ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆʼ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪ ಮನವೊಲಿಕೆ:

ಮುನಿರತ್ನ ಅವರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆಗಮಿಸಿ ಅವರ ಮನವೊಲಿಸಿದರು. ನಂತರ ಮುನಿರತ್ನ ಅವರು ಪ್ರತಿಭಟನೆ ಕೈಬಿಟ್ಟು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರ ಭೇಟಿಗೆ ತೆರಳಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News