ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್‌ಪೋರ್ಸ್ ರಚನೆಗೆ ಚಿಂತನೆ: ಸಚಿವ ಸಂತೋಷ್ ಲಾಡ್

Update: 2023-10-03 07:57 GMT

ವಿಜಯಪುರ.ಅ.3: ಬಾಲಕಾರ್ಮಿಕರ ರಕ್ಷಣೆಗೆ ಟಾಸ್‌ಪಾಸ್ಕ್ ರಚಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ವಿಜಯಪುರದ ಕಾಂಗ್ರೆಸ್ ಕಚೇರಿಗೆ ಸೌಹಾರ್ದಯುತ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

ಬಳಿಕ ಕಾರ್ಮಿಕ ಮಂಡಳಿ,ಜಿಲ್ಲಾ ಮುಖಂಡರು,ಕಾರ್ಮಿಕ ಇಲಾಖೆಯ ಅಧಿಕಾರಿಗಳ‌ ಜೊತೆ ಸಂತೋಷ್ ಲಾಡ್ ಕಾರ್ಮಿಕರು ಹಾಗೂ ಸಮಸ್ಯೆಗಳ ಕುರಿತು ಒಂದಿಷ್ಟು ಚರ್ಚಿಸಿದರು.

ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನ ಮಾಡಬೇಕು.ಬುಡ ಸಹಿತ ಕಿತ್ತುಹಾಕಬೇಕು‌.ಯಾವುದೇ ಮಕ್ಕಳಲಾಗಲೀ ಅದರಲ್ಲಿಯೂ ಬಡವರ ಮಕ್ಕಳನ್ನು ವಿದ್ಯಾಭ್ಯಾಸದತ್ತ ಹೆಚ್ಚೆಚ್ಚು ಪ್ರೋತ್ಸಾಹಿಸಬೇಕು.ಯಾವುದೇ ಕಾರಣದಿಂದಲೂ ಮಕ್ಕಳನ್ನು ಬಾಲಕಾರ್ಮಿಕದಂತಹ ಪಿಡುಗಿಗೆ ತಳ್ಳಲೇಬಾರದು.ಪೋಷಕರಾಗಲೀ ಇನ್ಯಾರೇ ಆಗಲೀ ಮಕ್ಕಳನ್ನು ಬಾಲಕಾರ್ಮಿಕದಂತಹ ಪಿಡುಗಿಗೆ ತಳ್ಳುವುದನ್ನು ತಾವೆಂದಿಗೂ ಸಹಿಸುವುದಿಲ್ಲ.ಅಧಿಕಾರಿಗಳು ಇದರತ್ತ ಗಮನ ಹರಿಸಬೇಕು.ಇಂತಹ ಸಮಸ್ಯೆ ಬಂದ ಕೂಡಲೇ ಅಥವಾ ಕಂಡ ಕೂಡಲೇ ಅದನ್ನು ಗುರುತಿಸಿ ಕಾರಣ ತಿಳಿದು ಸಮಸ್ಯೆಯನ್ನು ಪರಿಹರಿಸಬೇಕು‌.ಮಕ್ಕಳು ಯಾವುದೇ ಕಾರಣದಿಂದಲೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.ಬಾಲಕಾರ್ಮಿಕ ಸಮಸ್ಯೆ ಎನ್ನುವುದು ಬಹಳಷ್ಟು ಬೇಸರದ ಸಂಗತಿಯಾಗಿದ್ದು,ಇದು ಮಕ್ಕಳ ಭವಿಷ್ಯಕ್ಕೆ ಹಾನಿಕಾರಕ.ಹೀಗಾಗಿ ಇದನ್ನು ನಿರ್ಮೂಲನ ಮಾಡುವಲ್ಲಿ ಅಧಿಕಾರಿಗಳು ಶ್ರಮವಹಿಸಲೇಬೇಕೆಂದು ಸಂತೋಷ್ ಲಾಡ್ ಸಭೆಯಲ್ಲಿ ತಾಕೀತು ಮಾಡಿದರು.

ಸಭೆಯಲ್ಲಿ ಬಾಲ ಕಾರ್ಮಿಕರನ್ನು ಉಪಯೋಗಿಸುತ್ತಿರುವ ಸ್ಥಳಗಳನ್ನು ಗುರುತಿಸಿ,ಅವರ ರಕ್ಷಣೆಗೆ ಮುಂದಾಗಬೇಕೆಂದು ಚರ್ಚಿಸಲಾಯಿತು.ಅಲ್ಲದೇ ಸೆಸ್ ಸಂಗ್ರಹ ಬಗ್ಗೆಯೂ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ನಾಗಠಾಣಾ ಶಾಸಕ ಕಟಕದೊಂಡ,ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಿಸಿನ್, ಕಾರ್ಮಿಕ ಇಲಾಖಾ ಆಯುಕ್ತ ಗೋಪಾಲಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಕಾರ್ಯದರ್ಶಿ ಭಾರತಿ,ಬಿಜಾಪುರ ಜಿಲ್ಲಾಧಿಕಾರಿ ಬೂಬಾಲನ್,ಪೊಲೀಸ್ ವರಿಷ್ಠಾಧಿಕಾರಿ ಕೃಷಿಕ ಸ್ ಸೋನಾವಾನಿ,ಜಿ.ಪಂ ಮುಖ್ಯ ಕಾರ್ಯನಿರ್ವಣಹಣಾಧಿಕಾರಿ ಸೇರಿದಂತೆ ಮತ್ತಿತ್ತರ ಇಲಾಖಾ ಪ್ರಮುಖರು ಜಿಲ್ಲಾ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News