ವಿಜಯಪುರ: ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ; ಏಳು ಕಾರ್ಮಿಕರ ಮೃತದೇಹ ಪತ್ತೆ
Update: 2023-12-05 07:23 GMT
ವಿಜಯಪುರ: ನಗರದ ಕೈಗಾರಿಕಾ ಪ್ರದೇಶದ 'ರಾಜ್ ಗುರು ಫುಡ್' ಗೋದಾಮಿನ ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ.
ಮೃತರನ್ನು ಬಿಹಾರ ಮೂಲದ ಕಾರ್ಮಿಕರಾದ ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ (29), ಶಂಬು ಮುಖಿಯಾ (26), ರಾಮ್ ಬಾಲಕ್ (38), ಲೋಖಿ ಜಾಧವ್ (56), ಕಿಶನ್ ಕುಮಾರ (20), ದಾಲನಚಂದ ಮುಖಿನ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಋಷಿಕೇಶ್ ಸೋನಾವಣೆ, ʼ8 ಜನ ಕಾರ್ಮಿಕರಲ್ಲಿ 7 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಎಲ್ಲರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ನಿನ್ನೆ ಸಾಯಂಕಾಲದಿಂದ ಸತತ 17ಗಂಟೆ ಕಾರ್ಯಾಚರಣೆ ನಡೆಸಲಾಗಿದೆ. ರಾಜಗುರು ಫುಡ್ ಮಾಲೀಕ, ಸೂಪರ್ವೈಸರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.