ರಾಜ್ಯ ಹಜ್ ಸಮಿತಿಗೆ 16 ಸದಸ್ಯರ ನಾಮ ನಿರ್ದೇಶನ: ಸರಕಾರ ಆದೇಶ

Update: 2024-03-01 15:06 GMT

ಬೆಂಗಳೂರು: ರಾಜ್ಯ ಸರಕಾರವು ಹಜ್ ಸಮಿತಿಗೆ ಮಾ.1ರಿಂದ ಅನ್ವಯಿಸುವಂತೆ ಮೂರು ವರ್ಷಗಳ ಕಾಲಾವಧಿಗೆ 16 ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.

ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಶಾಸಕ ರಿಝ್ವಾನ್ ಅರ್ಶದ್, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಬೆಳಗಾವಿಯ ಸಮೀಉಲ್ಲಾ ಮಡಿವಾಳೆ, ದಾವಣಗೆರೆಯ ಶೇಕ್ ಮುಹಮ್ಮದ್ ಸಯೀದ್, ಚನ್ನಪಟ್ಟಣದ ವಸೀಲ್ ಅಲಿಖಾನ್, ಧಾರ್ಮಿಕ ಮುಖಂಡರಾದ ಬೆಂಗಳೂರಿನ ಮುಹಮ್ಮದ್ ಝೈನುಲ್ ಆಬಿದೀನ್ ರಶಾದಿ ಮುಝೈರಿ, ದಕ್ಷಿಣ ಕನ್ನಡ ಜಿಲ್ಲೆಯ ಮುಹಮ್ಮದ್ ಅಶ್ರಫ್ ತಂಙಳ್ ಆದೂರ್, ಚಿಕ್ಕಬಳ್ಳಾಪುರದ ಸೈಯದ್ ಮುಹಮ್ಮದ್ ರಝಾ ಅವರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.

ಜೊತಗೆ, ಬೀದರ್ ಜಿಲ್ಲೆಯ ಸೈಯದ್ ಮನ್ಸೂರ್ ಅಹ್ಮದ್ ಖಾದ್ರಿ, ಬೆಂಗಳೂರಿನ ಎಸ್.ಝುಲ್ಫಿಖಾರ್ ಅಹ್ಮದ್ ಖಾನ್, ಸೈಯದ್ ಮುಝಮ್ಮಿಲ್, ಸೈಯದ್ ಮುಜಾಹಿದ್, ಸೈಯದ್ ಶಾಹಿದ್ ಅಹ್ಮದ್, ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರನ್ನು ಸದಸ್ಯರನ್ನಾಗಿ ಹಾಗೂ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News