ಭದ್ರತಾ ವೈಫಲ್ಯ; ಸಂಸತ್ತಿನಲ್ಲಿ ಚರ್ಚಿಸಲು ಮೋದಿ ಹಿಂದೇಟು ಹಾಕುತ್ತಿರುವುದೇಕೆ?: ಕಾಂಗ್ರೆಸ್

Update: 2023-12-18 12:59 GMT

ಬೆಂಗಳೂರು: ಸಂಸತ್ತಿನಲ್ಲಿ ಭದ್ರತಾ ವೈಫಲ್ಯವಾಗಿರುವ ಸಂಗತಿಯನ್ನು ಸಂಸತ್ತಿನಲ್ಲಿ ಚರ್ಚಿಸಲು ಮೋದಿ ಹಿಂದೇಟು ಹಾಕುತ್ತಿರುವುದೇಕೆ. ತಮ್ಮ ಬಂಡವಾಳ ಬಯಲಾಗುವ ಭಯವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ಈ ಸಂಬಂಧ ʼಎಕ್ಸ್‌ʼ ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, "ನರೇಂದ್ರ ಮೋದಿ ಅವರು ಉತ್ತರದಾತ್ವದಿಂದ ತಪ್ಪಿಸಿಕೊಳ್ಳುವ ಉತ್ತರಕುಮಾರ" ಎಂದು  ಟೀಕೆ ಮಾಡಿದೆ.

ʼಪುಲ್ವಾಮ ದಾಳಿಯ ತನಿಖೆ ಮುಗಿಯಲೇ ಇಲ್ಲ, ಭದ್ರತಾ ವೈಫಲ್ಯದ ಲೋಪದ ಸಂಗತಿ ಹೊರಬರಲಿಲ್ಲ ಏಕೆ ಮೋದಿಯವರೇ?. ಯೋಧರ ಹತ್ಯೆಯನ್ನು ತನಿಖೆ ಮಾಡುವುದಕ್ಕಿಂತ ಸಾರ್ವಜನಿಕ ಚರ್ಚೆಯ ಮೂಲಕ ಚುನಾವಣೆಗೆ ಬಳಸಿಕೊಂಡಿದ್ದೀರಿ ಅಲ್ಲವೇ?. ಸಂಸತ್ ದಾಳಿ ಪ್ರಕರಣದಲ್ಲಿ ನಿಮ್ಮದೇ ಪಕ್ಷದ ಸಂಸದ ಪ್ರತಾಪ್‌ ಸಿಂಹ ಅವರನ್ನು ತನಿಖೆಗೆ ಒಳಪಡಿಸದಿರುವಾಗ ನಿಮ್ಮ ತನಿಖೆಗೆ ವಿಶ್ವಾಸಾರ್ಹ ಎಂದು ನಂಬಲು ಸಾಧ್ಯವೇʼ ಎಂದು ಲೇವಡಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News