ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ವಶಕ್ಕೆ

Update: 2023-11-09 05:00 GMT

ಬೆಂಗಳೂರು, ನ.9: ವಿಮಾನದಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಯುವತಿಯೊಬ್ಬರ ಅಂಗಾಂಗವನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಪ್ರಾಂಕ್‍ಫರ್ಟ್‍ನಿಂದ ನಗರಕ್ಕೆ ಬರುತ್ತಿದ್ದ ಲುಪ್ತಾನ್ಸ ಏರ್ಲೈನ್ಸ್ ಎಲ್‍ಹೆಚ್ 0754 ವಿಮಾನದಲ್ಲಿ ಸಹ ಪ್ರಯಾಣಕಿಯಾಗಿದ್ದ ಯುವತಿಗೆ ಅಂಗಾಂಗಗಳನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ ರಂಗನಾಥ(50) ಎಂಬುವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ವಿಮಾನದಲ್ಲಿ ಆಂಧ್ರಪ್ರದೇಶದ ತಿರುಪತಿ ಮೂಲದ ಯುವತಿಯು ಪ್ರಯಾಣಿಸುತ್ತಿದ್ದು, ಯುವತಿಯು ವಿಮಾನದ ಸೀಟ್ ನಂ.38ಕೆನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಪ್ರಯಾಣ ಪ್ರಾರಂಭವಾದ ನಾಲ್ಕು ಗಂಟೆ ನಂತರ ಯುವತಿ ನಿದ್ರೆಗೆ ಜಾರಿದ್ದಾರೆ. ಬಳಿಕ ರಾತ್ರಿ ಸುಮಾರು 11:45ಕ್ಕೆ ಯುವತಿಯು ಎಚ್ಚರಗೊಂಡಾಗ ಸೀಟ್ ನಂ.38ಜೆನಲ್ಲಿ ಕುಳಿತಿದ್ದ ರಂಗನಾಥ್, ಅವರ ಖಾಸಗಿ ಅಂಗವನ್ನು ಮುಟ್ಟುತ್ತಿದ್ದ ಎಂದು ಆರೋಪಿಸಲಾಗಿದೆ. 

ಆ ಬಳಿಕ ಯುವತಿಯು ರಂಗನಾಥ್ ಕೈಯನ್ನು ಎಳೆದು ವಿಮಾನ ಸಿಬ್ಬಂದಿಗಳನ್ನು ಕರೆದು ವಿಷಯ ತಿಳಿಸಿದ್ದಾರೆ ಎಂದು ಹೇಳಲಾಗಿದೆ. 

ಘಟನೆ ಸಂಬಂಧ ವಿಮಾನದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ರಂಗನಾಥ್ ವಿರುದ್ಧ ದೂರು ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News