ಎಸೆಸೆಲ್ಸಿ ಪರೀಕ್ಷೆ-2ರ ವೇಳಾಪಟ್ಟಿ ಪ್ರಕಟ : ಜೂ.14ರಿಂದ ರಾಜ್ಯಾದ್ಯಂತ ಪರೀಕ್ಷೆಗಳು ಆರಂಭ
Update: 2024-05-18 13:28 GMT
ಬೆಂಗಳೂರು : 2024ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆ-2 ರಾಜ್ಯಾದ್ಯಂತ ಜೂ.14ರಿಂದ ಜೂ.22ರ ವರೆಗೆ ನಡೆಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಹಿಂದೆ ಪರೀಕ್ಷೆಯನ್ನು ಜೂ.7ರಿಂದ ಜೂ.14ರ ವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿತ್ತು.
ಜೂ.14ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಸಂಸ್ಕೃತ, ಇಂಗ್ಲಿಷ್ ಮತ್ತು ಇಂಗ್ಲಿಷ್(ಎನ್‍ಸಿಇಆರ್ ಟಿ) ಪರೀಕ್ಷೆ, ಜೂ.15ರಂದು ಹಿಂದಿ, ಹಿಂದಿ(ಎನ್‍ಸಿಇಆರ್ ಟಿ), ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಪರೀಕ್ಷೆಗಳು ನಡೆಯಲಿವೆ.
ಜೂ.18ರಂದು ಗಣಿತ ಮತ್ತು ಸಮಾಜಶಾಸ್ತ್ರ, ಜೂ.19ರಂದು ಅರ್ಥಶಾಸ್ತ್ರ, ಜೂ.20ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಪರೀಕ್ಷೆ, ಜೂ.21 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಮತ್ತು ಜೂ.22ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.