25 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ

Update: 2024-07-03 12:05 IST
25 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ
  • whatsapp icon

ಬೆಂಗಳೂರು: ರಾಜ್ಯ ಸರ್ಕಾರ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರನ್ನಾಗಿ‌ 2007 ರ ಐಪಿಎಸ್ ಬ್ಯಾಚಿನ ಎನ್.ಶಶಿಕುಮಾರ್ ಅವರನ್ನು ‌ನೇಮಕ ಮಾಡಿದೆ. ಪ್ರಸ್ತುತ ಹುದ್ದೆಯಲ್ಲಿದ್ದ ರೇಣುಕಾ ಸುಕುಮಾರ್ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.‌

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಿ.ಬಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಿ, ಮುಂದಿನ ಆದೇಶದವರೆಗೆ ಬೆಂಗಳೂರು  ವೈರ್ ಲೆಸ್ ವಿಭಾಗದ ಸೂಪರಿಂಟೆಂಡೆಂಟ್ ಆಗಿ ನೇಮಿಸಲಾಗಿದೆ.

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು 

1. ಲಾಭುರಾಮ್ – ಐಜಿಪಿ-ಕೇಂದ್ರ ವಲಯ, ಬೆಂಗಳೂರು

2. ಡಾ. ಬಿ.ಆರ್​. ರವಿಕಾಂತೇಗೌಡ – ಐಜಿಪಿ, ಹೆಡ್ ಕ್ವಾಟರ್ಸ್ -01

3. ಡಾ. ಕೆ. ತ್ಯಾಗರಾಜನ್​ – ಐಜಿಪಿ, ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ)

4. ಎನ್​. ಶಶಿಕುಮಾರ್ – ಕಮಿಷನರ್, ಹುಬ್ಬಳ್ಳಿ ಧಾರವಾಢ

5. ಬಿ. ರಮೇಶ್ – ಡಿಐಜಿ-ಪೂರ್ವ ವಲಯ, ದಾವಣಗೆರೆ

6. ಸೀಮಾ ಲಾಟ್ಕರ್ -ಕಮಿಷನರ್, ಮೈಸೂರು ನಗರ

7. ರೇಣುಕಾ ಕೆ.ಸುಕುಮಾರ್ – ಎಐಜಿಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು

8. ಸಿ.ಕೆ.ಬಾಬಾ – ಎಸ್​ಪಿ, ಬೆಂಗಳೂರು ಗ್ರಾಮಾಂತರ

9. ಎನ್​. ವಿಷ್ಣುವರ್ಧನ – ಎಸ್​ಪಿ, ಮೈಸೂರು ಜಿಲ್ಲೆ

10. ಸುಮನ್.ಡಿ.ಪನೇಕರ್ -ಎಸ್​ಪಿ, ಬಿಎಂಟಿಎಫ್, ಬೆಂಗಳೂರು

11. ಸಿ.ಬಿ. ರಿಷ್ಯಂತ್ – ಎಸ್​ಪಿ- ವೈರ್​ಲೆಸ್, ಬೆಂಗಳೂರು

12. ಚನ್ನಬಸವಣ್ಣ ಲಂಗೋಟಿ – ಎಐಜಿಪಿ, ಆಡಳಿತ, ರಾಜ್ಯ ಪೊಲೀಸ್​ ಪ್ರಧಾನ ಕಚೇರಿ, ಬೆಂಗಳೂರು

13. ನಾರಾಯಣ್. ಎಂ -ಎಸ್​ಪಿ, ಉತ್ತರ ಕನ್ನಡ ಜಿಲ್ಲೆ

14. ಸಾರಾ ಫಾತೀಮಾ – ಡಿಸಿಪಿ, ಈಶಾನ್ಯ ವಿಭಾಗ

15. ಅರುಣಾಂಗ್ಷು ಗಿರಿ – ಎಸ್​ಪಿ, ಸಿಐಡಿ, ಬೆಂಗಳೂರು

16. ನಾಗೇಶ್ ಡಿ.ಎಲ್ – ಡಿಸಿಪಿ, ಸಿಎಆರ್​ಎಚ್, ಪ್ರಧಾನ ಕಚೇರಿ, ಬೆಂಗಳೂರು

17. ಪದ್ಮಿನಿ ಸಾಹೋ – ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು

18. ಪ್ರದೀಪ್ ಗುಟ್ಟಿ- ಎಸ್​ಪಿ, ಬೀದರ್ ಜಿಲ್ಲೆ

19. ಯತೀಶ್ ಎನ್ – ಎಸ್​ಪಿ, ದಕ್ಷಿಣ ಕನ್ನಡ ಜಿಲ್ಲೆ

20. ಮಲ್ಲಿಕಾರ್ಜುನ್ ಬಾಲದಂಡಿ – ಎಸ್​ಪಿ, ಮಂಡ್ಯ ಜಿಲ್ಲೆ

21. ಶೋಭಾ ರಾಣಿ ವಿ.ಜೆ – ಎಸ್​ಪಿ, ಬಳ್ಳಾರಿ ಜಿಲ್ಲೆ

22. ಕವಿತಾ ಬಿ.ಟಿ.- ಎಸ್​ಪಿ, ಚಾಮರಾಜನಗರ ಜಿಲ್ಲೆ

23. ನಿಖಿಲ್ .ಬಿ – ಎಸ್​ಪಿ, ಕೋಲಾರ ಜಿಲ್ಲೆ

24. ಕುಶಾಲ್ ಚುಕ್ಸಿಯಾ – ಎಸ್​ಪಿ, ಚಿಕ್ಕಬಳ್ಳಾಪುರ ಜಿಲ್ಲೆ

25. ಮಹಾನಿಂಗ ನಂದಾಗಾನ್ವಿ – ಡಿಸಿಪಿ, ಹುಬ್ಬಳ್ಳಿ-ಧಾರವಾಡ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News