ಸಂವಿಧಾನದ ಆಶಯ ಪೂರೈಸುವವರು ಅಧಿಕಾರದಲ್ಲಿರಬೇಕು: ಸಚಿವ ಎಚ್.ಸಿ.ಮಹದೇವಪ್ಪ

Update: 2023-12-02 17:48 GMT

ಬೆಂಗಳೂರು: ಸಂವಿಧಾನದ ಆಶಯಗಳನ್ನು ಪೂರೈಸುವವರು ಅಧಿಕಾರದಲ್ಲಿ ಇರಬೇಕು, ಆದರೆ ಕೇಂದ್ರದ ಆಡಳಿತದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವವರು ಅಧಿಕಾರದಲ್ಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಶನಿವಾರ ನಗರದ ಕ್ವೀನ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯ ಭವನದಲ್ಲಿ ರಾಜ್ಯ ಹಣಕಾಸು ಸಂಸ್ಥೆಯ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಪೂರ್ಣಮಟ್ಟದಲ್ಲಿ ಜಾರಿಯಾದರೆ ಈ ನೆಲದ ಪ್ರತಿಯೊಬ್ಬನೂ ಘನತೆಯ ಜೀವನ ನಡೆಸಲು ಸಹಕಾರಿಯಾಗುತ್ತದೆ. ಆದ್ದರಿಂದ ಸಂವಿಧಾನದ ಆಶಯಗಳು ಜಾರಿಯಾಗಬೇಕಾದರೆ, ಅದರಲ್ಲಿ ಬದ್ಧತೆ ಇರುವವರು ಅಧಿಕಾರದ ಸ್ಥಾನದಲ್ಲಿರಬೇಕು ಎಂದರು.

ಅಧಿಕಾರ ನಮ್ಮ ಎಲ್ಲ ಸಮಸ್ಯೆಗಳ ಬೀಗದ ಕೈ ಇದ್ದಂತೆ. ಅದನ್ನು ಕೊಡುವಾಗ ಯೋಗ್ಯರು, ಸಮರ್ಥರು, ವಿವೇಚನೆಯುಳ್ಳವರ ಕೈಗೆ ಕೊಡಬೇಕು. ಆಗಿದ್ದಾಗ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ, ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಜ್ವಲ್‍ಕುಮಾರ್ ಘೋಷ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News