ಮನಮೋಹನ್ ಸಿಂಗ್ : ಬಂಡವಾಳಶಾಹಿ ಭಾರತದ ಮುಕುಟ, ಬಡವರ ಭಾರತದ ಸಂಕಟ
ಭಾಗ- 3
ಆಹಾರ ಭದ್ರತೆ ಕಾಯ್ದೆ ಮತ್ತು ರೈತರ ಭೂಮಿ ವಶ ನಿಯಂತ್ರಣ ಕಾಯ್ದೆಗಳು 2013ರ ಅಂತ್ಯದಲ್ಲಿ ಚುನಾವಣೆಗೆ ಸ್ವಲ್ಪ ಮುಂಚೆ ಜಾರಿಯಾದ ಕಾಯ್ದೆಗಳು. ಆದರೆ ಎಡಪಕ್ಷಗಳೂ ಕೂಡ ಒಓಖಇಉಂ ಇತ್ಯಾದಿ ಆತ್ಮಹತ್ಯೆ ಪ್ರಮಾಣ ಹಾಗೂ ಬದುಕಿನ ಬಿಕ್ಕಟ್ಟಿನ ತೀವ್ರತೆಗಳನ್ನು ಕಡಿಮೆ ಮಾಡುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ಸು ಪಡೆದವೇ ವಿನಾ ಆತ್ಮಹತ್ಯೆಗೆ ಕಾರಣವಾದ ಮಾರುಕಟ್ಟೆ ಪರ ನೀತಿಗಳನ್ನು ತಡೆಯಲು ಅಲ್ಲ ಎನ್ನುವುದು ಈ ಪ್ರಜಾತಂತ್ರವನ್ನು ಕಾರ್ಪೊರೇಟ್ ಶಕ್ತಿಗಳು ಎಷ್ಟು ಅಧೀನದಲ್ಲಿಟುಕೊಂಡಿವೆ ಎನ್ನುವುದಕ್ಕೆ ಉದಾಹರಣೆಯಂತಿದೆ. ಕೃಷಿಯ ಖಾಸಗೀಕರಣದ ತಾರ್ಕಿಕ ಬೆಳವಣಿಗೆಯೇ ಮೋದಿ ಸರಕಾರ 2020ರಲ್ಲಿ ಜಾರಿಗೆ ತಂದು ಹಿಂದೆಗೆದುಕೊಂಡ ಆದರೆ ಹಲವು ರಾಜ್ಯಗಳಲ್ಲಿ ಈಗಲೂ ಜಾರಿಯಲ್ಲಿರುವ ಮೂರು ರೈತ ವಿರೋಧಿ ಶಾಸನಗಳು.
ಉದ್ಯೋಗರಹಿತ ಅಭಿವೃದ್ಧಿಯಿಂದ ಉದ್ಯೋಗ ಕಡಿತ ಅಭಿವೃದ್ಧಿಯ ಕಡೆಗೆ
ಮನಮೋಹನಾಮಿಕ್ಸ್ ಹೇಗೆ ಮೋದಾನಿಮಿಕ್ಸ್‌ಗೆ ದಾರಿ ಮಾಡಿಕೊಟ್ಟಿತೆಂಬುದನ್ನು ಉದ್ಯೋಗ ಮತ್ತು ಉದ್ಯಮ ವಲಯದ ಮಾರುಕಟ್ಟೆ ಸುಧಾರಣೆಗಳ ಪರಿಣಾಮಗಳು ವಿವರಿಸುತ್ತವೆ. 2004-14ರ ಸಿಂಗ್ ಪ್ರಧಾನಿ ಅವಧಿಯಲ್ಲಿ ಉದ್ಯಮ ಮತ್ತು ಕೈಗಾರಿಕಾ ವಲಯಗಳಲ್ಲಿ ಮಾರುಕಟ್ಟೆ ಸುಧಾರಣೆಗಳು ಕೇವಲ ಬೃಹತ್ ಕಾರ್ಪೊರೇಟ್ ಕಂಪೆನಿಗಳ ಏಕಸ್ವಾಮ್ಯವನ್ನು ಸೃಷ್ಟಿಸಿತು. ಸಣ್ಣ ಮತ್ತು ಅತಿಸಣ್ಣ ಉದ್ಯಮಗಳನ್ನು ನುಂಗಿಹಾಕಿತು. ಇದರಿಂದ ಉದ್ಯೋಗಗಳನ್ನು ಸೃಷ್ಟಿಸದ ಹೂಡಿಕೆಗಳು ಉದ್ಯೋಗ ರಹಿತ ಅಭಿವೃದ್ಧಿಯನ್ನಷ್ಟೇ ಸಾಧಿಸಿದವು. ಮತ್ತೊಂದು ಕಡೆ ಸಿಂಗ್ ಪ್ರಾರಂಭಿಸಿದ ಮಾರುಕಟ್ಟೆ ಪರ ಆರ್ಥಿಕ ಸುಧಾರಣೆಗಳು ಕೃಷಿ ಬಿಕ್ಕಟ್ಟನ್ನು ಹುಟ್ಟು ಹಾಕಿ ಕೃಷಿಯಿಂದ ಕೋಟ್ಯಂತರ ಯುವಕರು ಬೀದಿಗೆ ಬಿದ್ದರು. ಆದರೆ ದೊಡ್ಡ ಕಾರ್ಪೊರೇಟ್ ಹೂಡಿಕೆಗಳು ಉದ್ಯೋಗ ಸೃಷ್ಟಿಗಿಂತ ಲಾಭದ ಹಿಂದೆ ಬಿದ್ದು ಆಟೊಮೇಶನ್ ಅಳವಡಿಸಿಕೊಂಡಿದ್ದವು. ಮತ್ತೊಂದು ಕಡೆ ಶೇ. 50ರಷ್ಟು ಅಸಂಘಟಿತ ಉದ್ಯೋಗಗಳನ್ನು ಸೃಷ್ಟಿಸುವ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಸುಧಾರಣೆಯ ಭಾಗವಾಗಿ ಸರಕಾರದ ಬೆಂಬಲ ಹಿಂದೆಗೆದುಕೊಂಡಿದ್ದರಿಂದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರವೇ ಕುಸಿದಿತ್ತು. 2004ರಲ್ಲಿ ಭಾರತದ ಜಿಡಿಪಿಯಲ್ಲಿ ತಯಾರಿಕಾ ಕ್ಷೇತ್ರದಲ್ಲಿ ಜಿಡಿಪಿಯ ಪಾಲು ಶೇ. 24 ಮಾಡಬೇಕು ಎಂದುಕೊಂಡಿದ್ದರೂ 2014ರಲ್ಲಿ ಅದು ಶೇ. 16ರಷ್ಟೇ ಇತ್ತು. ಈಗ ಅದು ಶೇ. 15ಕ್ಕೆ ಇಳಿದಿದೆ. ಮೋದಿ ಅವಧಿಯಲ್ಲಿ ಈ ಮಾದರಿಯು ಇನ್ನು ತಾರಕಕ್ಕೆ ಹೋಗಿ ಉದ್ಯೋಗ ರಹಿತ ಅಭಿವೃದ್ಧಿಯು ತಾರ್ಕಿಕವಾಗಿ ಉದ್ಯೋಗ ಕಡಿತ ಅಭಿವೃದ್ಧಿಯಾಗಿದೆ.
ಹೆಚ್ಚಿನ ವಿವರಗಳಿಗೆ ಆಸಕ್ತರು ಈ ಅಧ್ಯಯನವನ್ನು ಗಮನಿಸಬಹುದು:
https://www.rvoicmai.in/e-book/Structural-Transformation-of-the-Indian-Economy-Past-performance-and-Way-forwar-lHD79grbUKwssk
ಸಾಮಾಜಿಕ ನ್ಯಾಯವನ್ನು ನುಂಗಿಹಾಕಿದ ಮಾರುಕಟ್ಟೆ ಸುಧಾರಣೆಗಳು
ಮಾರುಕಟ್ಟೆಯೆಂದರೆ ಮೆರಿಟೋಕ್ರಸಿ. ಅರ್ಥಾತ್ ಬ್ರಾಹ್ಮಣ್ಯ. ಪರಿಣಿತಿ ಮತ್ತು ಪ್ರತಿಭೆಯ ಹೆಸರಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಾಶ ಮಾಡುವ ಪ್ರಕ್ರಿಯೆಗಳನ್ನು ಮಾರುಕಟ್ಟೆ ಸುಧಾರಣೆಗಳು 1991ರಲ್ಲಿ ಹುಟ್ಟಿ ಹಾಕಿತು. ಸರಕಾರವು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ವಲಯದಿಂದ ಹಿಂದೆಗೆದುಕೊಳ್ಳಬೇಕು ಮತ್ತು ಸರಕಾರದ ಗಾತ್ರವನ್ನು ಕಡಿತಗೊಳಿಸಿಕೊಳ್ಳಬೇಕು ಎಂಬುದು ಸಿಂಗ್-ರಾವ್ ಮತ್ತು ಈಗಿನ ಮೋದಿ-ಶಾ ಮಾರುಕಟ್ಟೆ ನೀತಿಗಳ ಹೂರಣ. ಹೀಗಾಗಿಯೇ 1991ರಲ್ಲಿ 1.92 ಕೋಟಿ ಉದ್ಯೋಗಗಳು ಕೇಂದ್ರೀಯ ಸಾರ್ವಜನಿಕ ವಲಯದಲ್ಲಿದ್ದವು. ಸಿಂಗ್ ಸುಧಾರಣೆಗಳ ಖಾಸಗೀಕರಣ ನೀತಿಗಳು ಅದನ್ನು 2014ರ ವೇಳೆಗೆ 1.2 ಕೋಟಿಗೆ ಇಳಿಸಿದವು. ಈಗ ಅದು ಮೋದಿ ಕಾಲದಲ್ಲಿ 90 ಲಕ್ಷದ ಆಸುಪಾಸಿನಲ್ಲಿದೆ. ಅಂದರೆ ಕೇವಲ ಕೇಂದ್ರ ವಲಯದಲ್ಲೇ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಸಿಗಬೇಕಿದ್ದ 90 ಲಕ್ಷ ಉದ್ಯೋಗಗಳು ಕಣ್ಮರೆಯಾಗಿವೆ. ಮಾರುಕಟ್ಟೆಯ ಮೆರಿಟೊಕ್ರಸಿ ಖಾಸಗಿ ವಲಯವನ್ನು ನವ ಅಗ್ರಹಾರಗಳನ್ನಾಗಿಸಿವೆ. ಸರಕಾರಿ ವೆಚ್ಚ ಕಡಿಮೆ ಮಾಡಬೇಕೆಂಬ ನೀತಿಯಿಂದಾಗಿ ಬ್ಯಾಕ್ ಲಾಗ್‌ಗಳು ಹೆಚ್ಚಾಗಿವೆ. ಕರ್ನಾಟಕ ಸರಕಾರದಲ್ಲೇ 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಉಳಿದಂತೆ ಶಿಕ್ಷಣ ಮತ್ತು ಆರೋಗ್ಯಗಳು ತುಟ್ಟಿಯಾಗಿ ದಲಿತ ಹಿಂದುಳಿದ ಸಮುದಾಯಗಳು ಪ್ರಾಥಮಿಕ ಹಂತದಲ್ಲೇ ಮಾರುಕಟ್ಟೆ ನಿರ್ದೇಶಿತ ಅವಕಾಶ ವಂಚನೆಗೆ ಗುರಿಯಾಗುತ್ತಿವೆ. ಇವೆಲ್ಲವೂ ಮೋದಿ ಯುಗದಲ್ಲಿ ಇನ್ನು ದೈತ್ಯಾಕಾರವಾಗಿ ಬೆಳೆದು ನಿಂತಿದೆ.
ಮನಮೋಹನ್ ಸಿಂಗ್ ಏಕೆ ಈ ವಿಷಯಗಳಿಗೆ ಕೋಪಗೊಳ್ಳಲಿಲ್ಲ?
ಇವಿಷ್ಟೂ ಪ್ರಧಾನಿ ಮನಮೋಹನ್ ಸಿಂಗ್‌ರ ನೀತಿ ನಿಲುವುಗಳ ವಿಶ್ಲೇಷಣೆಯಾಯಿತು. ಇದರ ಸಾರವಿಷ್ಟೆ. ಮೋದಿಗೆ ಹೋಲಿಸಿದಲ್ಲಿ ಸಿಂಗ್ ವ್ಯಕ್ತಿಯಾಗಿ ಅತ್ಯಂತ ಗೌರವಾರ್ಹರಾದರೂ ದೇಶದ ಬದುಕೆಂದರೆ ಇಲ್ಲಿನ ತಳ ಸಮುದಾಯಗಳ ಬದುಕು ಎಂದು ಭಾವಿಸಿದಲ್ಲಿ ಸಿಂಗ್ ಬಂಡವಾಳಶಾಹಿ ಭಾರತಕ್ಕೆ ಮುಕುಟವಾದರೇ ವಿನಾ ಬಡಭಾರತಕ್ಕೆ ಹೆಚ್ಚಿನ ಸಂಕಟವನ್ನೇ ತಂದೊಡ್ಡಿದರು. ಆ ನೀತಿಗಳೇ ಇಂದಿನ ಮೋದಿ ಫ್ಯಾಶಿಸ್ಟ್ ಆರ್ಥಿಕ ನೀತಿಗಳಿಗೆ ಬುನಾದಿಯಾಯಿತು. ಆದ್ದರಿಂದ ಮೋದಿ-ಅದಾನಿಮಿಕ್ಸ್‌ಗೆ ಮನಮೋಹನಾಮಿಕ್ಸ್ ಖಂಡಿತಾ ಪರ್ಯಾಯವಲ್ಲ.
ಆದರೆ ವ್ಯಕ್ತಿಯಾಗಿಯೂ ಮನಮೋಹನ್‌ಸಿಂಗ್ ನಿಗರ್ವಿ, ಕೀರ್ತಿ ಶನಿಯನ್ನು ತಿರಸ್ಕರಿಸಿದ ಉತ್ತಮ ವ್ಯಕ್ತಿ ಎಂಬುದನ್ನು ಅವರ ಒಡನಾಟದಲ್ಲಿದ್ದವರೆಲ್ಲ ಬರೆಯುತ್ತಿದ್ದಾರೆ. ಪ್ರಧಾನಿಯಾಗಿ ಮೋದಿಯನ್ನು ನೋಡುತ್ತಿರುವವರಿಗೆ ಸಿಂಗ್ ಪವಾಡವೆನಿಸಬಹುದು.
ಆದರೂ ಅವರ ಸುದೀರ್ಘ ಸರಕಾರಿ ಜೀವನದಲ್ಲಿ ಅವರು ತೋರಿದ ವ್ಯೆಹಾತ್ಮಕ ಅಯ್ಕೆ ಹಾಗೂ ಮೌನಗಳು ತಮ್ಮ ವೈಯಕ್ತಿಕ ಕೋಪತಾಪಗಳನ್ನು ಅಡಗಿಸಿಕೊಳ್ಳದೆ ಬಹಿರಂಗ ಪಡಿಸಿದ ಪ್ರಕರಣಗಳು ಕೆಲವು ಒಗಟುಗಳನ್ನು ಉಳಿಸುತ್ತವೆ ಮತ್ತು ಪ್ರಶ್ನೆಗಳನ್ನು ಮೂಡಿಸುತ್ತವೆ.
1971ರಲ್ಲಿ ಇಂದಿರಾಗಾಂಧಿ ಕಾಲದ ರಾಷ್ಟ್ರೀಕರಣದ ಮನಸ್ಥಿತಿಗೆ ಯಾವ ರೀತಿ ಒಗ್ಗಿಕೊಂಡರೋ ಅದೇ ರೀತಿ 1983ರ ಇಂದಿರಾಗಾಂಧಿಯವರ ಬಂಡವಾಳಶಾಹಿ ಉದಾರೀಕರಣದ ಮನಸ್ಥಿತಿಗೂ ಒಗ್ಗಿಕೊಂಡರು. 1987ರಲ್ಲಿ ಐಎಂಎಫ್ ವಿರೋಧಿ ಸೌತ್ ಕಮಿಷನ್‌ನ ಸೆಕ್ರಟರಿ ಜನರಲ್ ಆದಷ್ಟೇ ಸುಲಭವಾಗಿ 1991ರಲ್ಲಿ ಐಎಂಎಫ್‌ನ ಭಾರತದ ದಳಪತಿಯೂ ಆಗಿಬಿಟ್ಟರು. ಪರಸ್ಪರ ತದ್ವಿರುದ್ಧ ಮೌಲ್ಯಗಳ ಈ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅವರು ವೈಯಕ್ತಿಕವಾಗಿ ತೊಳಲಾಟಗಳನ್ನು ಅನುಭವಿಸಿರಬಹುದೇ ಎಂಬ ಒಗಟು ಉಳಿಯುತ್ತದೆ.
ಅದಕ್ಕಿಂತ ಹೆಚ್ಚಾಗಿ ಮನಮೋಹನ್ ಸಿಂಗ್ 1971ರಿಂದ ಪ್ರಾರಂಭವಾದ ಸುದೀರ್ಘ ಸರಕಾರಿ ಜೀವನದಲ್ಲಿ ಏಳು ಬಾರಿ ಮಾನಸಿಕ ತೊಳಲಾಟಗಳಿಂದ ರಾಜೀನಾಮೆ ಕೊಡಲು ಮುಂದಾದದ್ದನ್ನು ಅವರ ಸಮೀಪವರ್ತಿಗಳು ದಾಖಲಿಸಿದ್ದಾರೆ.
(https://www.deccanherald.com/india/when-rajiv-gandhi-p-v-narasimha-rao-and-sonia-gandhi-faced-manmohan-singhs-resignation-threats-3333741)
ಅವುಗಳಲ್ಲಿ ಐದು ಬಾರಿ ಮಂತ್ರಿಗಳು ಮತ್ತು ಪ್ರಧಾನಿಗಳು ಅವರಿಗೆ ವೈಯಕ್ತಿಕವಾಗಿ ಅಪಮಾನ ಮಾಡಿದ್ದಕ್ಕೆ. ನೀತಿಗಳ ವಿಷಯದಲ್ಲಿ ಅವರು ರಾಜೀನಾಮೆ ನೀಡಲು ಮುಂದಾದದ್ದು ಎರಡು ಬಾರಿ. ಕೃಷಿ ಮಾರುಕಟ್ಟೆ ಸುಧಾರಣೆಯ ನೀತಿಗಳ ಭಾಗವಾಗಿ ಗೊಬ್ಬರ ಬೆಲೆಯನ್ನು ಏರಿಸುವುದಕ್ಕೆ ವಿರೋಧ ಬಂದಾಗ. ಮತ್ತು ಎರಡನೇ ಬಾರಿ 2008ರಲ್ಲಿ ಭಾರತದ ಅಣುಶಕ್ತಿ ಸಾರ್ವಭೌಮತೆಯನ್ನು ಅಮೆರಿಕಕ್ಕೆ ಅಧೀನಗೊಳಿಸುವ ಅಮೆರಿಕದೊಡಗಿನ ನಾಗರಿಕ ಅಣುಶಕ್ತಿ ಒಪ್ಪಂದಕ್ಕೆ ಸಹಿ ಹಾಕದಂತೆ ಎಡಪಕ್ಷಗಳು ವಿರೋಧ ಮತ್ತು ಒತ್ತಡ ಹಾಕಿದಾಗ. ವಾಸ್ತವದಲ್ಲಿ ಇವೆರಡೂ ವಿಷಯದಲ್ಲಿ ಪಕ್ಷ ಮತ್ತು ಸರಕಾರ ಸಿಂಗ್‌ರ ಆಗ್ರಹಕ್ಕೆ ಮಣಿದು ‘ಸುಧಾರಣೆಗಳನ್ನು’ ಮುಂದುವರಿಸುತ್ತಾರೆ. ಪರಿಣಾಮ ರೈತ ಬದುಕಿನ ಬಿಕ್ಕಟ್ಟು ಮತ್ತು ಅಮೆರಿಕದ ಮಿಲಿಟರಿ ಗುಲಾಮಗಿರಿ ಮೋದಿ ಕಾಲದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಮನಮೋಹನ್ ಸಿಂಗ್‌ರ ವ್ಯಕ್ತಿತ್ವದಲ್ಲಿ ಮೇಲಿನ ರಾಜೀನಾಮೆ ಪ್ರಕರಣಗಳು ಅಪವಾದ. ಆದರೂ ಮೇಲಿನ ನೀತಿಗಳ ವಿಷಯಕ್ಕೆ ಕೋಪಗೊಂದು ರಾಜೀನಾಮೆಗೆ ಮುಂದಾದ ಸಿಂಗ್ ಬಾಬರಿ ಮಸೀದಿ ಕೆಡವಿದ ಪ್ರಕರಣದಲ್ಲಿ ರಾವ್ ಅವರ ಮೌನ ಬೆಂಬಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದಾಖಲೆಯಿಲ್ಲ.
ಹಾಗೆಯೇ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ವಿಸ್ತರಣೆಯ ಪ್ರಸ್ತಾಪವನ್ನು ಕೈಬಿಟ್ಟ ಬದಲಿಗೆ 2010ರಲ್ಲಿ ಮೇಲ್ಜಾತಿ ಬಡವರಿಗೆ ಇಡಬ್ಲ್ಯುಎಸ್ ಮೀಸಲತಿಯ ಕರಡು ರೂಪಿಸಿದ್ದರ ವಿರುದ್ಧ, ಕಾರ್ಪೊರೇಟ್ ಗಳಿಗೆ ಅರಣ್ಯ ಬಿಟ್ಟುಕೊಡಲು ಆದಿವಾಸಿಗಳನ್ನು ಕೊಂದು ಹಾಕುವ ಆಪರೆಷನ್ ಗ್ರೀನ್ ಹಂಟ್ ಪ್ರಾರಂಭಿಸಿದ್ದರ ಬಗ್ಗೆ ಅಥವಾ ಅತ್ಯಂತ ಕರಾಳ ಯುಎಪಿಎ ಕಾಯ್ದೆಯನ್ನು ಜಾರಿಗೊಳಿಸಿದ್ದರ ಬಗ್ಗೆ ಅಥವಾ 2009ರಲ್ಲಿ ವೀಸಾ ಕಾಯ್ದೆಗೆ ಇಂದು ಮೋದಿ ಸರಕಾರ ಸಿಎಎ ಕಾಯ್ದೆಗೆ ಬುನಾದಿ ಎಂದು ಪರಿಗಣಿಸಿರುವ ಧರ್ಮಾಧಾರಿತ ತಾರತಮ್ಯಗಳ ತಿದ್ದುಪಡಿಯನ್ನು ಮಾಡುವಾಗಲೂ...
ಮನಮೋಹನ್ ಸಿಂಗ್‌ರಿಗೆ ಪಕ್ಷದ ಬಗ್ಗೆಯಾಗಲೀ ಸರಕಾರದ ಬಗ್ಗೆಯಾಗಲೀ ಏಕೆ ಕೋಪ ಬರಲಿಲ್ಲ? ಏಕೆ ರಾಜೀನಾಮೆಗೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳು ಮನಮೋಹನ್ ಸಿಂಗ್ ಎಂಬ ಸಜ್ಜನರ ಬಗ್ಗೆಯೂ ಉಳಿದುಬಿಡುತ್ತವೆ.
ಅವುಗಳಲ್ಲಿ ಐದು ಬಾರಿ ಮಂತ್ರಿಗಳು ಮತ್ತು ಪ್ರಧಾನಿಗಳು ಅವರಿಗೆ ವೈಯಕ್ತಿಕವಾಗಿ ಅಪಮಾನ ಮಾಡಿದ್ದಕ್ಕೆ. ನೀತಿಗಳ ವಿಷಯದಲ್ಲಿ ಅವರು ರಾಜೀನಾಮೆ ನೀಡಲು ಮುಂದಾದದ್ದು ಎರಡು ಬಾರಿ. ಕೃಷಿ ಮಾರುಕಟ್ಟೆ ಸುಧಾರಣೆಯ ನೀತಿಗಳ ಭಾಗವಾಗಿ ಗೊಬ್ಬರ ಬೆಲೆಯನ್ನು ಏರಿಸುವುದಕ್ಕೆ ವಿರೋಧ ಬಂದಾಗ ಮತ್ತು ಎರಡನೇ ಬಾರಿ 2008ರಲ್ಲಿ ಭಾರತದ ಅಣುಶಕ್ತಿ ಸಾರ್ವಭೌಮತೆಯನ್ನು ಅಮೆರಿಕಕ್ಕೆ ಅಧೀನಗೊಳಿಸುವ ಅಮೆರಿಕದೊಡಗಿನ ನಾಗರಿಕ ಅಣುಶಕ್ತಿ ಒಪ್ಪಂದಕ್ಕೆ ಸಹಿ ಹಾಕದಂತೆ ಎಡಪಕ್ಷಗಳು ವಿರೋಧ ಮತ್ತು ಒತ್ತಡ ಹಾಕಿದಾಗ. ವಾಸ್ತವದಲ್ಲಿ ಇವೆರಡೂ ವಿಷಯದಲ್ಲಿ ಪಕ್ಷ ಮತ್ತು ಸರಕಾರ ಸಿಂಗ್‌ರ ಆಗ್ರಹಕ್ಕೆ ಮಣಿದು ‘ಸುಧಾರಣೆಗಳನ್ನು’ ಮುಂದುವರಿಸುತ್ತಾರೆ. ಪರಿಣಾಮ ರೈತ ಬದುಕಿನ ಬಿಕ್ಕಟ್ಟು ಮತ್ತು ಅಮೆರಿಕದ ಮಿಲಿಟರಿ ಗುಲಾಮಗಿರಿ ಮೋದಿ ಕಾಲದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಮನಮೋಹನ್ ಸಿಂಗ್‌ರ ವ್ಯಕ್ತಿತ್ವದಲ್ಲಿ ಮೇಲಿನ ರಾಜೀನಾಮೆ ಪ್ರಕರಣಗಳು ಅಪವಾದ. ಆದರೂ ಮೇಲಿನ ನೀತಿಗಳ ವಿಷಯಕ್ಕೆ ಕೋಪಗೊಂಡು ರಾಜೀನಾಮೆಗೆ ಮುಂದಾದ ಸಿಂಗ್ ಬಾಬರಿ ಮಸೀದಿ ಕೆಡವಿದ ಪ್ರಕರಣದಲ್ಲಿ ರಾವ್ ಅವರ ಮೌನ ಬೆಂಬಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದಾಖಲೆಯಿಲ್ಲ.
ಹಾಗೆಯೇ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ವಿಸ್ತರಣೆಯ ಪ್ರಸ್ತಾವವನ್ನು ಕೈಬಿಟ್ಟ ಬದಲಿಗೆ 2010ರಲ್ಲಿ ಮೇಲ್ಜಾತಿ ಬಡವರಿಗೆ ಇಡಬ್ಲ್ಯುಎಸ್ ಮೀಸಲಾತಿಯ ಕರಡು ರೂಪಿಸಿದ್ದರ ವಿರುದ್ಧ, ಕಾರ್ಪೊರೇಟ್‌ಗಳಿಗೆ ಅರಣ್ಯ ಬಿಟ್ಟುಕೊಡಲು ಆದಿವಾಸಿಗಳನ್ನು ಕೊಂದು ಹಾಕುವ ಆಪರೇಷನ್ ಗ್ರೀನ್ ಹಂಟ್ ಪ್ರಾರಂಭಿಸಿದ್ದರ ಬಗ್ಗೆ ಅಥವಾ ಅತ್ಯಂತ ಕರಾಳ ಯುಎಪಿಎ ಕಾಯ್ದೆಯನ್ನು ಜಾರಿಗೊಳಿಸಿದ್ದರ ಬಗ್ಗೆ ಅಥವಾ 2009ರಲ್ಲಿ ವೀಸಾ ಕಾಯ್ದೆಗೆ ಇಂದು ಮೋದಿ ಸರಕಾರ ಸಿಎಎ ಕಾಯ್ದೆಗೆ ಬುನಾದಿ ಎಂದು ಪರಿಗಣಿಸಿರುವ ಧರ್ಮಾಧಾರಿತ ತಾರತಮ್ಯಗಳ ತಿದ್ದುಪಡಿಯನ್ನು ಮಾಡುವಾಗಲೂ...
ಮನಮೋಹನ್ ಸಿಂಗ್‌ರಿಗೆ ಪಕ್ಷದ ಬಗ್ಗೆಯಾಗಲೀ ಸರಕಾರದ ಬಗ್ಗೆಯಾಗಲೀ ಏಕೆ ಕೋಪ ಬರಲಿಲ್ಲ? ಏಕೆ ರಾಜೀನಾಮೆಗೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳು ಮನಮೋಹನ್ ಸಿಂಗ್ ಎಂಬ ಸಜ್ಜನರ ಬಗ್ಗೆಯೂ ಉಳಿದುಬಿಡುತ್ತವೆ.