ಅಪರಾಧಿಗಳು ಮತ್ತು ಸಹಚರರು

ಅಂತರ್ರಾಷ್ಟ್ರೀಯ ಕಾನೂನಿನ ಅಪರಾಧ ಉಲ್ಲಂಘನೆಗಳಲ್ಲಿ ಅಮೆರಿಕ ಇಸ್ರೇಲ್ನ ಪ್ರಮುಖ ಸಹವರ್ತಿಯಾಗಿದೆ. ಆದರೆ ಇತರ ಸಹಚರರು ಸಹ ಇದ್ದಾರೆ. ಇವುಗಳಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿ ಸೇರಿವೆ ಮತ್ತು, ನಿಜ ಹೇಳಬೇಕೆಂದರೆ, ನಮ್ಮದೇ ಆದ ಭಾರತ ಗಣರಾಜ್ಯವೂ ನಿರಪರಾಧಿಯಾಗಿರಲಿಲ್ಲ.

Update: 2024-10-05 06:02 GMT

2023ರ ಅಕ್ಟೋಬರ್ 7ರಂದು ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ದಾಳಿಯನ್ನು ಪ್ರಾರಂಭಿಸಿತು. 1,100ಕ್ಕೂ ಹೆಚ್ಚು ಜನರು ಬಲಿಯಾಗಿ ಹೋದರು. ಅವರಲ್ಲಿ ನಾಲ್ಕನೇ ಮೂರರಷ್ಟು ನಾಗರಿಕರಿದ್ದರು. ಇಸ್ರೇಲ್ ತಕ್ಷಣವೇ ಹಮಾಸ್ನಿಂದ ನಿಯಂತ್ರಿಸಲ್ಪಡುವ ಗಾಝಾದ ಪಕ್ಕದ ಫೆಲೆಸ್ತೀನಿಯನ್ ಪ್ರದೇಶದ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಕೆಲ ದಿನಗಳ ನಂತರ ಅಥವಾ ಹೆಚ್ಚೆಂದರೆ ಕೆಲ ವಾರಗಳ ನಂತರ, ಇಸ್ರೇಲಿಗಳು ಬಾಂಬ್ ದಾಳಿಯನ್ನು ನಿಲ್ಲಿಸುತ್ತಾರೆ ಎಂದು ಯಾರಾದರೂ ಯೋಚಿಸಿದ್ದಿರಬಹುದು ಮತ್ತು ಆಶಿಸಿದ್ದಿರಬಹುದು. ಆದರೆ ಪ್ರತೀಕಾರದ ಈ ಘೋರ ಆಕ್ರಮಣಕ್ಕೆ ಈಗ ವರ್ಷವಾಗುತ್ತಿದೆ. ಇಸ್ರೇಲಿ ಪಡೆಗಳು 50,000ಕ್ಕೂ ಹೆಚ್ಚು ಫೆಲೆಸ್ತೀನಿಯರನ್ನು ಕೊಂದಿವೆ. ಅವರಲ್ಲಿ ಬಹುಶಃ 90 ಪ್ರತಿಶತದಷ್ಟು ನಾಗರಿಕರು. ಫೆಲೆಸ್ತೀನಿಯನ್ನರ ಮತ್ತು ಇಸ್ರೇಲಿಗಳ ಅಧಿಕೃತ ಸಾವಿನ ಅನುಪಾತ ಸರಿಸುಮಾರು 50:1ರಷ್ಟಿದೆ. ಆದರೂ ಇದು ದುಃಖದ ಪ್ರಮಾಣವನ್ನು ಪ್ರತಿಬಿಂಬಿಸುವುದಿಲ್ಲ. ಗಾಝಾದಿಂದ ಸ್ಥಳಾಂತರಗೊಂಡವರ ಸಂಖ್ಯೆಯೇ ಒಂದು ಮಿಲಿಯನ್ಗಿಂತಲೂ ಹೆಚ್ಚು.

ಗಾಝಾದಲ್ಲಿ ವಿನಾಶದ ನಂತರ, ಇಸ್ರೇಲ್ ಈಗ ಲೆಬನಾನ್ ದೇಶದ ಮೇಲೆ ಮುಗಿಬಿದ್ದಿದೆ. ಇಲ್ಲಿಯೂ ಭಯೋತ್ಪಾದಕರು ಮತ್ತು ಅಮಾಯಕ ನಾಗರಿಕರ ನಡುವೆ ವ್ಯತ್ಯಾಸವನ್ನು ಗುರುತಿಸಬೇಕೆನ್ನುವ ಕಾಳಜಿ ಅದಕ್ಕಿಲ್ಲ. ನಿರ್ದಿಷ್ಟ ವ್ಯಕ್ತಿಗಳನ್ನು ತೊಡೆದುಹಾಕುವ ಪ್ರಯತ್ನದಲ್ಲಿ ಅದು ಲೆಬನಾನಿನ ನೂರಾರು ನಾಗರಿಕರನ್ನು ಕೊಂದಿದೆ ಮತ್ತು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ.

ಅಂತರ್ರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಇಸ್ರೇಲ್ ಮತ್ತು ಹಮಾಸ್ ಎರಡನ್ನೂ ಯುದ್ಧಾಪರಾಧಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಇದು ಸಂಪೂರ್ಣ ಸತ್ಯ. ಕಳೆದ ಅಕ್ಟೋಬರ್ನಲ್ಲಿ ಹಮಾಸ್ನಿಂದ ನಡೆದ ನಾಗರಿಕರ ಹತ್ಯೆಗಳನ್ನು ಯಾವುದೇ ಐತಿಹಾಸಿಕ ಸಂದರ್ಭವೂ ಕ್ಷಮಿಸಲು ಅಥವಾ ವಿವರಿಸಲು ಸಾಧ್ಯವಿಲ್ಲ. ಇಸ್ರೇಲ್ನ ಅಪರಾಧಗಳು ನಿಸ್ಸಂದೇಹವಾಗಿ ಇನ್ನೂ ಹೆಚ್ಚು ಎಂದು ಐಸಿಸಿ ಹೇಳಿದೆ. ಪ್ರತೀಕಾರದ ಹುಚ್ಚಿನಲ್ಲಿ ಅದು ವಿವೇಚನೆಯಿಲ್ಲದೆ ವರ್ತಿಸಿದೆ. ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸಿ ನೆಲಸಮ ಮಾಡಿದೆ. ಫೆಲೆಸ್ತೀನಿಯನ್ನರನ್ನು ಕೊಲ್ಲುವುದಷ್ಟೇ ಅಲ್ಲದೆ, ಆಹಾರ, ನೀರು ಮತ್ತು ವಿದ್ಯುತ್ ಪೂರೈಕೆಯನ್ನು ತಡೆಹಿಡಿಯುವ ಅಥವಾ ಪೂರ್ತಿಯಾಗಿ ನಿರ್ಬಂಧಿಸುವ ಮೂಲಕ ಅಸಂಖ್ಯಾತ ಜನರನ್ನು ಹಸಿವಿನ ಕೂಪಕ್ಕೆ ತಳ್ಳಿದೆ.

ಗಾಝಾದಲ್ಲಿನ ಸಂಘರ್ಷದ ವರದಿಗಳು ಮುಖ್ಯವಾಗಿ, ಪರಸ್ಪರ ಪೈಪೋಟಿಯಲ್ಲಿರುವ ಎರಡು ಪಕ್ಷಗಳನ್ನು ನೋಡಿದೆ: ಇಸ್ರೇಲಿಗಳು ಮತ್ತು ಹಮಾಸ್. ಆದರೆ ಈ ಅಂಕಣದಲ್ಲಿ, ಸಂಘರ್ಷವನ್ನು ಉಂಟುಮಾಡುವ ಮತ್ತು ಅದನ್ನು ಹಾಗೆಯೇ ಉಳಿಸಿಬಿಡುವಲ್ಲಿ ಪಾತ್ರ ವಹಿಸಿದ ಇತರ ಗುಂಪುಗಳು ಅಥವಾ ರಾಷ್ಟ್ರಗಳತ್ತ ಗಮನ ಹರಿಸಲಾಗಿದೆ. ಹೆಚ್ಚಿನ ಅಪರಾಧಗಳಲ್ಲದಿದ್ದರೂ, ಅಪರಾಧಿ ಸಹಚರರನ್ನು ಹೊಂದಿರುತ್ತಾನೆ. ಹಾಗಾದರೆ, ಒಂದು ಕಡೆ ಹಮಾಸ್ ಮತ್ತು ಇನ್ನೊಂದು ಕಡೆ ಇಸ್ರೇಲ್ಗೆ ಸಹಾಯ ಮಾಡಿದವರು ಯಾರು?

ಹಮಾಸ್ನ ಪ್ರಮುಖ ಸಹಚರರು ಇರಾನ್ ಮತ್ತು ಲೆಬನಾನ್ ಮೂಲದ ಹಿಜ್ಬುಲ್ಲಾ ಭಯೋತ್ಪಾದಕ ಗುಂಪೆಂದು ಪ್ರಮುಖ ಪಾಶ್ಚಿಮಾತ್ಯ ಮಾಧ್ಯಮಗಳು ಅವುಗಳ ಬಗ್ಗೆ ಹೇಳುತ್ತಲೇ ಬಂದಿವೆ. ಆದರೂ ಅವು ಇಸ್ರೇಲ್ನ ಸಹಚರರನ್ನು ಗುರುತಿಸಲು ಯಾಕೋ ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಬಹುಶಃ ನಾವು ಅದನ್ನು ಮಾಡಬೇಕಿದೆ. ಇಸ್ರೇಲಿ ಸರಕಾರದ ಕ್ರಿಮಿನಲ್ ನಡೆಗಳನ್ನು ಪ್ರಮುಖವಾಗಿ ಸಕ್ರಿಯಗೊಳಿಸುವುದು ಅಮೆರಿಕ. ಅದು ಇಸ್ರೇಲ್ಗೆ ನಿರಂತರ ಮಿಲಿಟರಿ ನೆರವನ್ನು ಒದಗಿಸಿದೆ. ಗಾಝಾದಲ್ಲಿ (ಮತ್ತು ಈಗ ಲೆಬನಾನ್) ವಿನಾಶವನ್ನು ಮುಂದುವರಿಸಲು ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ. ಕದನ ವಿರಾಮ ಮತ್ತು ನೋವಿಗೆ ವಿರಾಮ ತರಬಹುದಾದ ವಿಶ್ವಸಂಸ್ಥೆಯಲ್ಲಿ ನಿರ್ಣಯಗಳ ವಿರುದ್ಧ ವೀಟೋ ಅಥವಾ ಮತ ಚಲಾಯಿಸುವ ಮೂಲಕ ಅಮೆರಿಕ ಇಸ್ರೇಲ್ಗೆ ರಾಜತಾಂತ್ರಿಕ ರಕ್ಷಣೆಯನ್ನು ನೀಡಿದೆ.

ಅಮೆರಿಕ ತನ್ನದೇ ಆದ ಜಟಿಲತೆಯನ್ನು ಗುರುತಿಸಲು ನಿರಾಕರಿಸುವುದನ್ನು, ಮಾಜಿ ಪ್ರಥಮ ಮಹಿಳೆ, ಮಾಜಿ ಸೆನೆಟರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಕೆಲವು ಸಲದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರೊಂದಿಗೆ ಕಳೆದ ವಾರ ನಡೆದ ಒಂದು ಸಂದರ್ಶನದಲ್ಲಿ ವಿವರಿಸಲಾಗಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅವರ ಇತ್ತೀಚಿನ ಅನುಭವದ ಬಗ್ಗೆ ಕೇಳಲಾಯಿತು. ಅಲ್ಲಿ ಅವರು ಈಗ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಕಳೆದ ವರ್ಷ ಬೋಧನೆಯನ್ನು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಕೊಲಂಬಿಯಾ (ಮತ್ತು ಇತರ ಕ್ಯಾಂಪಸ್ಗಳು) ವಿದ್ಯಾರ್ಥಿಗಳ ಸಾಲು ಸಾಲು ಪ್ರತಿಭಟನೆಗಳು ನಡೆದವು. ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿ ನಿಲ್ಲಿಸಬೇಕು ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿತು. ಹಿಲರಿ ಕ್ಲಿಂಟನ್ ಈ ಪ್ರತಿಭಟನೆಗಳನ್ನು ತಳ್ಳಿಹಾಕಿದರು. ಅದಕ್ಕೆ ಅವರು ನೀಡಿದ್ದ ಕಾರಣ ಹೊರಗಿನಿಂದ ಬೆಂಬಲ ಮತ್ತು ಧನಸಹಾಯ ಸಿಗುತ್ತಿದೆ ಎಂಬ ಆಧಾರದ ಮೇಲೆ. ಈ ಪ್ರತಿಭಟನಾಕಾರರಲ್ಲಿ ಕೆಲವರು ಯೆಹೂದಿ ವಿರೋಧಿ ಶಕ್ತಿಗಳ ಬೆಂಬಲದಿಂದ ಸಕ್ರಿಯರಾಗಿದ್ದಾರೆ ಎಂದು ಕೂಡ ಅವರು ಪ್ರತಿಪಾದಿಸಿದರು.

ಈ ಆರೋಪಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಒದಗಿಸಲಾಗಿಲ್ಲ. ವಾಸ್ತವವಾಗಿ, ಹೊರಗಿನಿಂದ ಏಜೆಂಟರಂತೆ ಕೆಲವು ಪ್ರಚೋದಕರು ಕರೆಯದೆಯೂ ಬಂದರು. ಪ್ರತಿಭಟನೆಯಲ್ಲಿ ಹೆಚ್ಚಿನವರು ಈ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಾಗಿದ್ದರು. ಅವರು ತಮ್ಮದೇ ಖರ್ಚಿನಲ್ಲಿ ಇದೆಲ್ಲವನ್ನೂ ನಿಭಾಯಿಸುತ್ತಿದ್ದರು. ಜೊತೆಗೆ, ಅನೇಕ ಯೆಹೂದಿ ವಿದ್ಯಾರ್ಥಿಗಳು ಸೇರಿಕೊಂಡರು. ಏಕೆಂದರೆ, ಗಾಝಾದಲ್ಲಿ ಮಹಿಳೆಯರು ಮತ್ತು ಮಕ್ಕಳ ನಿರ್ದಾಕ್ಷಿಣ್ಯ ಹತ್ಯೆಯ ಸಂದರ್ಭದಲ್ಲಿ, ಒಟ್ಟಾರೆಯಾಗಿ ಮಾನವೀಯತೆಗೆ ಅವರು ಬದ್ಧತೆ ತೋರಿದರು. ಅವರ ಪೂರ್ವಜರ ನಂಬಿಕೆಯ ಪಕ್ಷಪಾತಿಗಳಾಗಿರಲು ಅವರು ಬಯಸಲಿಲ್ಲ. (ದುರದೃಷ್ಟವಶಾತ್, ಸಂದರ್ಶಕ, ಫರೀದ್ ಝಕರಿಯಾ, ಹಿಲರಿ ಕ್ಲಿಂಟನ್ ಅವರನ್ನು ಸತ್ಯಗಳೊಂದಿಗೆ ಮುಖಾಮುಖಿಯಾಗಿಸುವ ಧೈರ್ಯ ತೋರಿಸಲಿಲ್ಲ ಮತ್ತು ಅವರ ಆರೋಪಗಳನ್ನು ಪ್ರಶ್ನಿಸದೆ, ಅವರು ಮುಂದುವರಿಯಲು ಅವಕಾಶ ಮಾಡಿಕೊಟ್ಟರು).

ಹಿಲರಿ ಕ್ಲಿಂಟನ್ ಅವರ ಮಾತುಗಳನ್ನು ನ್ಯೂಯಾರ್ಕ್ನಿಂದ ದೂರದಲ್ಲಿದ್ದು ಕೇಳಿದಾಗ, ಹೊರಗಿನಿಂದ ಧನಸಹಾಯ ಮತ್ತು ಬೆಂಬಲ ನೀಡುವ ಮತ್ತೊಂದು ಸಂಸ್ಥೆ ಇದೆ ಎಂದು ನನಗೆ ಮನವರಿಕೆಯಾಯಿತು. ಅದು ಇಸ್ರೇಲ್ ಆಗಿತ್ತು ಮತ್ತದರ ಹಿಂದೆ ಅಮೆರಿಕ ಇತ್ತು. ಹಿಲರಿ ಕ್ಲಿಂಟನ್, ಆಕೆಯ ಟೀಕೆಗಳನ್ನು ಪ್ರಶ್ನಿಸಿದ್ದರೆ ಸತ್ಯ ತಿಳಿಯುತ್ತಿತ್ತೆ? ನನಗೆ ಅನುಮಾನವಿದೆ. ವಾಶಿಂಗ್ಟನ್ ಸ್ಥಾಪನೆಯ ಹೃದಯಭಾಗದಲ್ಲಿ ಕಳೆದ ದಶಕಗಳಿಂದ ಆಕೆ ಇದ್ದಾರೆ. ಅವರು ತನ್ನನ್ನು ಅಥವಾ ತನ್ನ ಸರಕಾರವನ್ನು ನಿಷ್ಕಳಂಕವಾಗಿರುವುದರ ಹೊರತಾದ ನೆಲೆಯಿಂದ ಎಂದಿಗೂ ನೋಡಲಾರರು.

ಪ್ರಸಕ್ತ ಸಂಘರ್ಷಕ್ಕೆ ಬಹಳ ಹಿಂದೆಯೇ, ಸತತವಾಗಿ ಅಮೆರಿಕದ ಅಧ್ಯಕ್ಷರು ಮತ್ತು ಅಮೆರಿಕದ ಸರಕಾರಗಳು ಅಂತರ್ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲಿ ಇಸ್ರೇಲ್ಗೆ ಮೌನವಾಗಿ ಸಹಾಯ ಮಾಡಿದವು. ವೆಸ್ಟ್ ಬ್ಯಾಂಕ್ನಾದ್ಯಂತ ಯೆಹೂದಿ ವಸಾಹತುಗಳ ವಿಸ್ತರಣೆ ಸಾಂದರ್ಭಿಕವಾಗಿ ವಾಶಿಂಗ್ಟನ್ನಿಂದ ಸೌಮ್ಯ ಖಂಡನೆಗೆ ತುತ್ತಾಯಿತೇ ಹೊರತು ದೃಢವಾಗಿ ತೋರಿಸಿಕೊಳ್ಳಲಿಲ್ಲ. ಡೆಮಾಕ್ರಟಿಕ್ ಅಥವಾ ರಿಪಬ್ಲಿಕನ್ ಯಾವುದೇ ಸರಕಾರವಿದ್ದರೂ, ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಇಸ್ರೇಲಿ ಸೈನ್ಯದಿಂದ ಬೆಂಬಲಿತವಾಗಿರುವ ಯೆಹೂದಿ ವಸಾಹತುಗಾರರು ಫೆಲೆಸ್ತೀನ್ ನೆಲದಲ್ಲಿ ನಡೆಸುತ್ತಿರುವ ಅತಿಕ್ರಮಣಗಳನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಅಥವಾ ಅದು ಅವುಗಳಿಗೆ ಇಷ್ಟವಿರಲಿಲ್ಲ. ದಶಕಗಳಲ್ಲಿ, ಈ ವಸಾಹತುಗಳು ಎಷ್ಟು ಮಟ್ಟಿಗೆ ಬೆಳೆದವೆಂದರೆ, ಅವು ಫೆಲೆಸ್ತೀನ್ ರಾಜ್ಯ ರಚನೆಯನ್ನೇ ಅಸಾಧ್ಯವಾಗಿಸಿವೆ. ಇದರ ಆಪಾದನೆ ಇಸ್ರೇಲ್ನಂತೆಯೇ ಅಮೆರಿಕದ ಮೇಲೆಯೂ ಇದೆ.

ಅಂತರ್ರಾಷ್ಟ್ರೀಯ ಕಾನೂನಿನ ಅಪರಾಧ ಉಲ್ಲಂಘನೆಗಳಲ್ಲಿ ಅಮೆರಿಕ ಇಸ್ರೇಲ್ನ ಪ್ರಮುಖ ಸಹವರ್ತಿಯಾಗಿದೆ. ಆದರೆ ಇತರ ಸಹಚರರು ಸಹ ಇದ್ದಾರೆ. ಇವುಗಳಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿ ಸೇರಿವೆ ಮತ್ತು ನಿಜ ಹೇಳಬೇಕೆಂದರೆ, ನಮ್ಮದೇ ಆದ ಭಾರತ ಗಣರಾಜ್ಯವೂ ನಿರಪರಾಧಿಯಾಗಿರಲಿಲ್ಲ.

ಇಸ್ರೇಲ್ನ ಮೇಲೆ ಹಮಾಸ್ ದಾಳಿಯ ಮೊದಲ ವರ್ಷವನ್ನು ನಾವು ಸ್ಮರಿಸುವಾಗ ಮತ್ತು ಇಸ್ರೇಲ್ನ ಕೈಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮುಗ್ಧ ಫೆಲೆಸ್ತೀನಿಯನ್ನರ ಸಾವಿನ ಸಂಖ್ಯೆಯನ್ನು ಕುರಿತು ಆಲೋಚಿಸುತ್ತಿರುವಾಗ, ಅಮೆರಿಕನ್ನರಿಗಿಂತ ಸ್ವಲ್ಪ ಹೆಚ್ಚು ಸ್ವಯಂ ಅರಿವು ಮತ್ತು ಸ್ವಯಂ ವಿಮರ್ಶಾತ್ಮಕವಾಗಿರಲು ನಾವು ಬಯಸುತ್ತೇವೆ. ಹಿಲರಿ ಕ್ಲಿಂಟನ್ ಹಾಗೆ ಎಂದೆಂದಿಗೂ ಇರಬಹುದು. ಕೊಲೆಗಡುಕ ಇಸ್ರೇಲ್ ಅಭಿಯಾನಕ್ಕೆ ಕನಿಷ್ಠ ಎರಡು ರೀತಿಯಲ್ಲಿ ಸಹಾಯ ಮಾಡಿದ್ದಕ್ಕಾಗಿ ನಾವು ನಮ್ಮ ಸರಕಾರವನ್ನು ಹೊಣೆಯಾಗಿಸಬಹುದು. ಆದರೆ ಯಾವುದೇ ಆಧಾರವಿಲ್ಲ. ಮೊದಲನೆಯದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯಗಳನ್ನು ಮತ್ತು ಇಸ್ರೇಲ್ ಅಂತರ್ರಾಷ್ಟ್ರೀಯ ಕಾನೂನನ್ನು ಅನುಸರಿಸಬೇಕು ಎಂಬುದನ್ನು ಬೆಂಬಲಿಸದಿರುವುದು. ಎರಡನೆಯದು, ಇಸ್ರೇಲ್ನ ಯುದ್ಧ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಭಾರತೀಯ ವಲಸೆ ಕಾರ್ಮಿಕರನ್ನು ಕಳುಹಿಸಿರುವುದು. ಈ ಕಾರ್ಮಿಕರ ಬಗ್ಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರಕಾರಗಳು ಸಕ್ರಿಯ ಪ್ರಚಾರ ಮಾಡುತ್ತವೆ.

ಇಸ್ರೇಲ್ಗೆ ಪ್ರಸಕ್ತ ಭಾರತ ಸರಕಾರದ ವಿಮರ್ಶಾತ್ಮಕವಲ್ಲದ ಬೆಂಬಲ ಎರಡು ಕಾರಣಗಳದ್ದು. ಒಂದು ವೈಯಕ್ತಿಕವಾದದ್ದು, ಅಂದರೆ, ನರೇಂದ್ರ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ನಡುವಿನ ದಶಕಗಳ ಸ್ನೇಹ. ಇನ್ನೊಂದು ಸೈದ್ಧಾಂತಿಕ. ಮುಸ್ಲಿಮರು ಇತರರೆಂಬ ಅನುಮಾನ ಹೊಂದಿರುವ ಇಸ್ರೇಲ್ನ ನಂಬಿಕೆಯನ್ನು ಹಿಂದುತ್ವ ಪ್ರಚಾರಕರು ಮೆಚ್ಚುತ್ತಾರೆ.

ಇಸ್ರೇಲ್ನ ಪರ ನಿಲುವಿನ ಮೂಲಕ ಮತ್ತು ಅದು ನಡೆಸಿದ ಹಿಂಸಾಚಾರವನ್ನು ಮನ್ನಿಸುವ ಮೂಲಕ ಭಾರತದ ಸ್ಥಾನ ವಿಶ್ವಮಟ್ಟದಲ್ಲಿ ದುರ್ಬಲಗೊಂಡಂತಾಗಿದೆ. ಕಳೆದ ತಿಂಗಳು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಧ್ಯಪ್ರಾಚ್ಯ ಬಿಕ್ಕಟ್ಟು ಚರ್ಚೆಗೆ ಒಳಗಾದಾಗ, ಭಾರತ ಶಾಂತಿಯ ಬಗ್ಗೆ ಪ್ರಾಮಾಣಿಕವಲ್ಲದ ಕೆಲ ಮಾತುಗಳನ್ನು ಹೇಳಿರಬಹುದು. ಮತ್ತೊಂದೆಡೆ, ಸ್ಲೊವೇನಿಯಾದ ಪ್ರಧಾನ ಮಂತ್ರಿ ಹೀಗೆ ಹೇಳಿದರು: ‘‘ನಾನು ಇಸ್ರೇಲಿ ಸರಕಾರಕ್ಕೆ ಇದನ್ನು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ: ರಕ್ತಪಾತವನ್ನು ನಿಲ್ಲಿಸಿ, ದುಃಖವನ್ನು ನಿಲ್ಲಿಸಿ, ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ. ಮಿಸ್ಟರ್ ನೆತನ್ಯಾಹು, ಈಗ ಈ ಯುದ್ಧವನ್ನು ನಿಲ್ಲಿಸಿ.’’ ಆಸ್ಟ್ರೇಲಿಯದ ವಿದೇಶಾಂಗ ಸಚಿವರು ಹೇಳಿದರು: ‘‘ಆಸ್ಟ್ರೇಲಿಯ ಮತ್ತು 152 ಇತರ ದೇಶಗಳು ಕದನ ವಿರಾಮಕ್ಕೆ ಮತ ಹಾಕಿ ಈಗ ಸುಮಾರು 300 ದಿನಗಳು ಮತ್ತು ಇಂದು, ನಾನು ಆ ಕರೆಯನ್ನು ಪುನರಾವರ್ತಿಸುತ್ತೇನೆ. ಲೆಬನಾನ್ ಮುಂದಿನ ಗಾಝಾ ಆಗಲು ಸಾಧ್ಯವಿಲ್ಲ.’’ ಸ್ಲೊವೇನಿಯಾ ಮತ್ತು ಆಸ್ಟ್ರೇಲಿಯ ಕೇವಲ ಪ್ರಜಾಪ್ರಭುತ್ವವಲ್ಲ, ಆದರೆ ಇಸ್ರೇಲ್ನ ಮುಖ್ಯ ಪೋಷಕ ಅಮೆರಿಕದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಆದರೂ ಅವುಗಳ ನಾಯಕರಿಗೆ ಸ್ಪಷ್ಟವಾದ ಧೈರ್ಯವಿದೆ. ನಮ್ಮ ಪ್ರಧಾನಿ ಮತ್ತು ನಮ್ಮ ವಿದೇಶಾಂಗ ಮಂತ್ರಿ ಇಬ್ಬರಲ್ಲೂ ಅದೇ ಕೊರತೆ.

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮಾತ್ರ ಪ್ರಜಾಪ್ರಭುತ್ವ ದೇಶ ಎಂದು ಹೇಳಲಾಗುತ್ತದೆ. ಅಮೆರಿಕ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಶಕ್ತಿಶಾಲಿ ಪ್ರಜಾಪ್ರಭುತ್ವವಾಗಿದೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಾಝಾದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಶಾಶ್ವತಗೊಳಿಸಲು ಈ ದೇಶಗಳು ಏನು ಮಾಡಿವೆ ಎಂಬುದರ ಬೆಳಕಿನಲ್ಲಿ ಈ ಎಲ್ಲಾ ವಾದಗಳು ಪೊಳ್ಳಾದವು. ಪ್ರತಾಪ್ ಭಾನು ಮೆಹ್ತಾ ಅವರು ಸಂಕ್ಷಿಪ್ತವಾಗಿ ಹೇಳುವಂತೆ, ‘‘ಇಲ್ಲಿ ಮೂರು ಪ್ರಜಾಪ್ರಭುತ್ವಗಳು ಅಂತರ್ರಾಷ್ಟ್ರೀಯ ಕ್ರಮವನ್ನು ಹಾಳುಗೆಡವುತ್ತಿವೆ: ಇಸ್ರೇಲ್ ತನ್ನ ಸಂಘರ್ಷದ ಕ್ರೂರತೆಯ ಮೂಲಕ, ಅಮೆರಿಕ ಅದರ ರಕ್ಷಣೆ ಮತ್ತು ತೊಡಕನ್ನು ಉಂಟುಮಾಡುವ ಮೂಲಕ ಮತ್ತು ಭಾರತ ತೊಡಕುಗಳ ಗಡಿಯಲ್ಲಿರುವ ತನ್ನ ತಪ್ಪಿಸಿಕೊಳ್ಳುವಿಕೆಯಿಂದ’’.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ರಾಮಚಂದ್ರ ಗುಹಾ

contributor

Similar News