ಮಾದಕ ದ್ರವ್ಯದ ದುಶ್ಚಟದಿಂದ ದೇಶ ಮುಕ್ತವಾಗಬೇಕು: ಯು.ಟಿ.ಖಾದರ್

Update: 2024-12-30 06:44 GMT

ಉಳ್ಳಾಲ :ಮಾದಕ ದ್ರವ್ಯ ದುಶ್ಚಟದಿಂದ ದೇಶ ಮುಕ್ತವಾಗಬೇಕು. ಇದನ್ನು ನಿರ್ಮೂಲನೆ ಮಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ನಮ್ಮದು. ಸಮಾಜವನ್ನು ಜೋಡಿಸುವ ಕೆಲಸ ನಮ್ಮಿಂದ ಆಗಬೇಕೇ ಹೊರತು ವಿಭಜಿಸುವ ಕೆಲಸ ಆಗಬಾರದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು

ಅವರು ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಇದರ ವಾರ್ಷಿಕೋತ್ಸವದ ಪ್ರಯುಕ್ತ ಮಾದಕದ್ರವ್ಯ ಮತ್ತು ಅಪರಾಧ ಚಟುವಟಿಕೆಗಳ ಕುರಿತು ನಾಟೆಕಲ್ ಜಂಕ್ಷನ್ ನಲ್ಲಿ ನಡೆದ ಜನ ಜಾಗೃತಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದಿಕ್ಸೂಚಿ ಭಾಷಣ ಮಾಡಿದ ವಿವಿ ಉಪಕುಲಪತಿ ಪ್ರೊ ಧರ್ಮ ಅವರು, ಮಾದಕವಸ್ತು ಗಳ ಜಾಲದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ಇದು ಗಂಭೀರ ವಿಚಾರ ಆಗಿದ್ದು, ಇದನ್ನು ನಿವಾರಣೆ ಮಾಡುವ ಕೆಲಸ ಆಗಬೇಕು.ಬೆಂಗಳೂರಿನಲ್ಲಿ ಈ ಜಾಲ ವ್ಯಾಪಕವಾಗಿ ಬೆಳೆದಿದೆ.ಈಗ ಮಂಗಳೂರು ಕೂಡ ಈ ಜಾಲದಲ್ಲಿ ಬೆಳೆದಿದ್ದು ,ಬೆಂಗಳೂರನ್ನು ಮೀರಿ ನಿಂತಿದೆ ಎಂದು ಹೇಳಿದರು.

ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಪಿ.ಎಸ್.ಮೊಯ್ದಿನ್ ಕುಂಞಿ ಮಾದಕ ದ್ರವ್ಯ ದಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು.

ಎಸಿಪಿ ಗೀತಾ ಕುಲಕರ್ಣಿ, ರುಕ್ಸಾನ ಹಸನ್ ಮಾತನಾಡಿದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹಾಸೀಮ್ ಬಂಡಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ದಲ್ಲಿ ಅಬೂಬಕ್ಕರ್ ಹಾಜಿ ನಾಟೆಕಲ್, ಪಿ.ಎಸ್.ಹನೀಫ್,ಟಿ.ಎಸ್.ಅಬ್ದುಲ್ಲಾ ಸಾಮಣಿಗೆ ಮತ್ತಿತರರು ಉಪಸ್ಥಿತರಿದ್ದರು. ಮೌಸೀರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಅಬೂಬಕ್ಕರ್ ಸಿದ್ದೀಕ್ ಉಸ್ತಾದ್ ವಂದಿಸಿದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News