ಮದ್ರಸ ಪಬ್ಲಿಕ್ ಪರೀಕ್ಷೆ: ಕೃಷ್ಣಾಪುರದ ಫಾತಿಮಾ ಹಾದಿಯಗೆ 596 ಅಂಕ
Update: 2025-04-14 22:39 IST

ಸುರತ್ಕಲ್: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಸುರತ್ಕಲ್ ರೇಂಜ್ ವ್ಯಾಪ್ತಿಯ ಅಲ್ ಮದ್ರಸತುಲ್ ಬದ್ರಿಯಾ 4ನೇ ಬ್ಲಾಕ್ ಮದ್ರಸದ ವಿದ್ಯಾರ್ಥಿನಿ ಫಾತಿಮಾ ಹಾದಿಯ 600ರಲ್ಲಿ596 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಕೃಷ್ಣಾಪುರ ನಿವಾಸಿ ಯಾಕೂಬ್ ಹುಸೈನ್ ಮತ್ತು ಸಕೀನಾ ದಂಪತಿಯ ಪುತ್ರಿ.