ಅಂಬೇಡ್ಕರ್ ಚಿಂತನೆ ಜಗತ್ತಿಗೆ ದಾರಿದೀಪ: ಬಿ.ಕೆ. ಇಮ್ತಿಯಾಝ್

Update: 2025-04-14 19:42 IST
ಅಂಬೇಡ್ಕರ್ ಚಿಂತನೆ ಜಗತ್ತಿಗೆ ದಾರಿದೀಪ: ಬಿ.ಕೆ. ಇಮ್ತಿಯಾಝ್
  • whatsapp icon

ಮಂಗಳೂರು: ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಮಾತ್ರವಲ್ಲ ಅವರೊಬ್ಬ ತತ್ವಜ್ಞಾನಿ ಮತ್ತು ದೂರದೃಷ್ಟಿಯ ಅರ್ಥಶಾಸ್ತ್ರಜ್ಞ ಆಗಿದ್ದರು. ಅವರ ಚಿಂತನೆಯಿಂದ ಮಾತ್ರ ಭಾರತವನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯಲು ಸಾಧ್ಯ ಮತ್ತು ಅಂಬೇಡ್ಕರ್ ಚಿಂತನೆ ಸಾರ್ವಕಾಲಿಕವಾಗಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಕಚೇರಿಯಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡುತ್ತಿದ್ದರು.

ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಗಳಿಂದ ದುರ್ಬಲ ಜನಾಂಗಗಳಿಗೆ ಸ್ವಾಭಿಮಾನದಿಂದ ಬದುಕುವ ಶಕ್ತಿ ಬಂದಿದೆ. ದೇಶದ ದುರ್ಬಲ ವರ್ಗದ ಜನರಿಗೆ ಸರ್ವರಿಗೂ ಸಮಪಾಲು, ಸಮಬಾಳಿನ ಬದುಕು ಸಿಗುವಂತಾಗಳು ಅಂಬೇಡ್ಕರ್ ಚಿಂತನೆಯ ಆಧಾರದಲ್ಲಿ ದೇಶದಲ್ಲಿ ಪ್ರಬಲ ಚಳುವಳಿ ಕಟ್ಟಬೇಕಿದೆ ಎಂದು ಅವರು ಹೇಳಿದರು.

ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್, ಎಂ ಶಿವಪ್ಪ, ಹಸನ್ ಕುದ್ರೋಳಿ, ವಿಜಯ ಜೈನ್, ಮುತ್ತುರಾಜ್, ರಫೀಕ್, ಹಸನ್ ಕುದ್ರೋಳಿ ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News