ಭಾರತದ ಅಭಿವೃದ್ಧಿಗೆ ಪಿ.ವಿ. ನರಸಿಂಹರಾವ್ ಬದ್ಧತೆ ಗಮನಾರ್ಹ: ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

Update: 2023-06-28 09:46 GMT

ಹೊಸದಿಲ್ಲಿ: ನರಸಿಂಹರಾವ್ ಅವರ "ದೂರದೃಷ್ಟಿಯ ನಾಯಕತ್ವ" ಹಾಗೂ "ಭಾರತದ ಅಭಿವೃದ್ಧಿಗೆ ಅವರ ಬದ್ಧತೆ ಗಮನಾರ್ಹವಾಗಿದೆ" ಎಂದು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಜನ್ಮದಿನವಾದ ಇಂದು(ಜೂ.28) ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ.

" ಪಿ.ವಿ. ನರಸಿಂಹರಾವ್ ಜಿ ಅವರನ್ನು ಅವರ ಜನ್ಮದಿನದಂದು ಸ್ಮರಿಸುತ್ತಿದ್ದೇನೆ. ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಭಾರತದ ಅಭಿವೃದ್ಧಿಗೆ ಅವರ ಬದ್ಧತೆ ಗಮನಾರ್ಹವಾಗಿದೆ. ನಮ್ಮ ರಾಷ್ಟ್ರದ ಪ್ರಗತಿಗೆ ಅವರ ಅಮೂಲ್ಯ ಕೊಡುಗೆಗಳನ್ನು ನಾವು ಗೌರವಿಸುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಪಿವಿ ನರಸಿಂಹ ರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಕಾಂಗ್ರೆಸ್ ಪಕ್ಷವು ಅವರು ಭಾರತವನ್ನು ಮರುಶೋಧಿಸಿದ ಗಣ್ಯ ರಾಜಕಾರಣಿ ಎಂದು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಹೇಳಿದೆ.

"ಅವರ ಜನ್ಮ ವಾರ್ಷಿಕೋತ್ಸವದಂದು ಭಾರತದ ಆರ್ಥಿಕತೆಗೆ ಕೆಲವು ಗಮನಾರ್ಹ ಉದಾರ ಸುಧಾರಣೆಗಳನ್ನು ಪರಿಚಯಿಸಿದ ಭಾರತದ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರನ್ನು ನಾವು ಸ್ಮರಿಸುತ್ತೇವೆ. ಸ್ವದೇಶ ಹಾಗೂ ವಿದೇಶದಲ್ಲಿ ಭಾರತವನ್ನು ಮರುಶೋಧಿಸಿದ ಖ್ಯಾತ ರಾಜನೀತಿ ತಜ್ಞರಾದ ರಾವ್ ಅವರಿಗೆ ನಾವು ನಮ್ರ ಗೌರವ ಸಲ್ಲಿಸುತ್ತೇವೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು ಜೂನ್ 28, 1921 ರಂದು ಜನಿಸಿದ್ದರು. ಅವರು 1991 ರಿಂದ 1996 ರವರೆಗಿನ ವರ್ಷಗಳಲ್ಲಿ ಭಾರತದ ಒಂಬತ್ತನೇ ಪ್ರಧಾನ ಮಂತ್ರಿಯಾಗಿದ್ದರು. ಅವರ ಸರಕಾರವು ಪ್ರಮುಖ ಆರ್ಥಿಕ ಸುಧಾರಣೆಗಳನ್ನು ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News