ಕೇದಾರನಾಥ : ಕುದುರೆಗೆ ಧೂಮಪಾನ ಮಾಡಲು ಬಲವಂತ, ಇಬ್ಬರ ವಿರುದ್ಧ ಎಫ್ಐಆರ್

Update: 2023-06-25 07:57 GMT

ಡೆಹ್ರಾಡೂನ್: ಕೇದಾರನಾಥ ಟ್ರೆಕ್ ನಲ್ಲಿಇಬ್ಬರು ವ್ಯಕ್ತಿಗಳು ಕುದುರೆಗೆ ಧೂಮಪಾನ ಮಾಡಲು ಬಲವಂತಪಡಿಸಿದ ವೈರಲ್ ವೀಡಿಯೊವನ್ನು ತನಿಖೆ ಮಾಡಲು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಪೊಲೀಸರು ಎಫ್ಐಆರ್ ಅಥವಾ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ.

ವೀಡಿಯೊ ಕ್ಲಿಪ್ ನಲ್ಲಿ, ಇಬ್ಬರು ಪುರುಷರು ಕುದುರೆಗೆ ಅದರ ಮೂಗಿನ ಹೊಳ್ಳೆಗಳ ಮೂಲಕ ಧೂಮಪಾನ ಮಾಡಲು ಬಲವಂತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಕುದುರೆಯ ಮೂಗಿನ ಹೊಳ್ಳೆಗಳನ್ನು ಹಾಗೂ ಅದರ ಬಾಯಿಯನ್ನು ತನ್ನ ಕೈಗಳಿಂದ ಮುಚ್ಚುತ್ತಿರುವುದು ಕಂಡುಬಂದರೆ, ಇನ್ನೊಬ್ಬ ಸುತ್ತಿದ ಕಾಗದವನ್ನು ಕುದುರೆಯ ಮೂಗಿಗೆ ಹಾಕುತ್ತಿದ್ದಾ . ವೀಡಿಯೊದ ಕೊನೆಯಲ್ಲಿ ಕುದುರೆಯು ಹೊಗೆಯನ್ನು ಹೊರಹಾಕುತ್ತಿರುವುದನ್ನು ಸಹ ಕಾಣಬಹುದು, ಆದರೆ ವ್ಯಕ್ತಿಗಳು ಪ್ರಾಣಿಯು ಮತ್ತೆ ಹೊಗೆಯನ್ನು ಉಸಿರಾಡುವಂತೆ ಬಲವಂತಪಡಿಸಿದ್ದಾರೆ.

ಇದೀಗ ವೈರಲ್ ಆಗಿರುವ ವೀಡಿಯೋಗೆ ಪ್ರತಿಕ್ರಿಯಿಸಿರುವ ರುದ್ರಪ್ರಯಾಗ ಪೊಲೀಸ್ ಇಲಾಖೆ, ಕುದುರೆ ಪಾಲಕನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

"ಈ ವರ್ಷದ ಯಾತ್ರೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದಂತೆ ರುದ್ರಪ್ರಯಾಗ ಜಿಲ್ಲಾ ಪೊಲೀಸರು ಒಟ್ಟು 14 ಪ್ರಕರಣಗಳನ್ನು ದಾಖಲಿಸಿದ್ದಾರೆ" ಎಂದು ಪೊಲೀಸರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

"ಇದು ಅತ್ಯಂತ ಖಂಡನೀಯ! ಅಂತಹ ಜನರನ್ನು ಹೊಡೆದು ಜೈಲಿಗೆ ಹಾಕಬೇಕು" ಎಂದು ಒಬ್ಬಟ್ವೀಟ್ ಬಳಕೆದಾರ ಬರೆದಿದ್ದಾರೆ.

"ಕೇದಾರನಾಥಕ್ಕೆ ಯಾತ್ರಿಗಳನ್ನು ಕೊಂಡೊಯ್ಯಲು ಬಳಸುವ ಕುದುರೆಗಳಿಗೆ ಈ ರೀತಿಯ ಕ್ರೌರ್ಯದ ವಿರುದ್ಧ ಕಾನೂನಿನ ನಿಬಂಧನೆಗಳ ಪ್ರಕಾರ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಪ್ರಾಣಿಗಳಿಗಾಗಿ ನನ್ನ ಹೃದಯವು ಮಿಡಿಯುತ್ತದೆ" ಎಂದು ಮತ್ತೊಬ್ಬರು ಹೇಳಿದರು.

ಕೆಲವು ನೆಟ್ಟಿಗರು ಕೇದಾರನಾಥ ಚಾರಣದ ಮಾರ್ಗದಲ್ಲಿ ನಡೆದ ಪ್ರಾಣಿ ಹಿಂಸೆಯ ಇತರ ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ. ಅಂತಹ ಒಂದು ವೀಡಿಯೊವು ಕುದುರೆಯು ರಸ್ತೆಯ ಉದ್ದಕ್ಕೂ ಸತ್ತು ಬಿದ್ದಿರುವುದನ್ನು ಹಾಗೂ ಜನರು ಅದರ ಮೂಲಕ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News