ಮೋದಿ ಸರಕಾರದ 9 ವರ್ಷಗಳ ಸಾಧನೆಗಳ ಪ್ರಚಾರ; ರಾಜ್ಯದಲ್ಲಿ ಜುಲೈ 30 ವರೆಗೆ ಅಭಿಯಾನ: ಸಿ.ಟಿ.ರವಿ
ಮಂಗಳೂರು, ಜೂ.22;ಮೋದಿ ಸರಕಾರದ 9 ವರ್ಷಗಳ ಸಾಧನೆಗಳ ಪ್ರಚಾರ ಅಭಿಯಾನ ರಾಜ್ಯ ದಲ್ಲಿ ಜುಲೈ 30 ವರೆಗೆ ಹಮ್ಮಿ ಕೊಳ್ಳಲಾಗಿದೆ ದೇಶಾದ್ಯಂತ ಜೂನ್ 30ರವರೆಗೆ ಈ ಅಭಿಯಾನ ನಡೆಯಲಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಕಾರ್ಯಕ್ರಮದ ಪ್ರಯಕ್ತ ಜಿಲ್ಲಾ ಪ್ರವಾಸಕ್ಕೆ 7 ತಂಡ ರಚಿಸಲಾಗಿದೆ. 2014 ರ ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಅನುಷ್ಠಾನ ದ ಮೂಲಕ ಸಾಧನೆ ಮಾಡಿದೆ. ಮೂವತ್ತಕ್ಕೂ ಹೆಚ್ಚು ತೆರಿಗೆ ಗಳನ್ನು ಸೇರಿಸಿ ಜಿಎಸ್ ಟಿ ಮಾಡಲಾಗಿದೆ. ದೇಶದಲ್ಲಿ ಜಿಎಸ್ ಟಿ ಮೂಲಕ ದಾಖಲೆಯ ತೆರಿಗೆ ಸಂಗ್ರಹ ವಾಗಿದೆ. ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ,11ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ದೇಶದಲ್ಲಿ ಹಿಂದೆ 74 ವಿಮಾನ ನಿಲ್ದಾಣಗಳಿತ್ತು. ಒಂಭತ್ತು ವರ್ಷಗಳಲ್ಲಿ 141 ವಿಮಾನ ನಿಲ್ದಾಣಗಳಾಗಿವೆ. ಹೊಸದಾಗಿ 14 ಐಐಎಂ, 25 ಏಮ್ಸ್ ಆಸ್ಪತ್ರೆ, 225 ಮೆಡಿಕಲ್ ಕಾಲೇಜು, 390 ವಿಶ್ವ ವಿದ್ಯಾಲಯಗಳು, ಸಾಗರ ಮಾಲಾ ಯೋಜನೆ ಸೇರಿದಂತೆ ವಿವಿಧ ಯೋಜನೆ ಗಳ ಮೂಲಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ದೇಶದ ಅಭಿವೃದ್ಧಿ ಸೂಚ್ಯಂಕ 7.2 ದಾಖಲಾಗಿದೆ. ಕೋವಿಡ್ ನಂತರ ಆರ್ಥಿಕ ವಾಗಿ ದೇಶದ 5ನೆ ಪ್ರಬಲ ದೇಶವಾಗಿ ಭಾರತ ಮೋದಿ ಯವರ ಆಡಳಿತದಲ್ಲಿ ಪ್ರಗತಿ ಸಾಧಿಸಿದೆ ಈ ಸಾಧನೆಗಳನ್ನು ಮನೆ ಮನೆಗೆ ತಿಳಿಸಲು ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದರು.
ವೆಬ್ ಸೈಟ್ ಹ್ಯಾಕ್ ಬಗ್ಗೆ ಕಾಂಗ್ರೆಸ್ ಮುಖಂಡ ರ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಕಾಂಗ್ರೆಸ್ ನಾಯಕರ ಹೇಳಿಕೆ ಮುಂದೆ ಬೇರೆ ರೀತಿ ತಿರುಗಬಹುದು. ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ ಎನ್ನಬಹುದು. ಹಾಗಾಗಿ ಹುಚ್ಚುಚ್ಚು ಹೇಳಿಕೆ ಕೊಡ್ತಿದ್ದಾರೆ. ಮೋದಿಯವರು ಹಲವು ಯೋಜನೆಗಳನ್ನು ಕೊಟ್ಟಿದ್ದಾರೆ, ಚುನಾವಣೆಗೆ ಗೆದ್ದ ಮೇಲೆ ಜನರ ಅವಶ್ಯಕತೆ ಗುರುತಿಸಿ ಮೋದಿ ಕೊಟ್ಟರು. ಇವರು ಚುನಾವಣೆಗೆ ಮೊದಲೇ ಡಂಗುರ ಹೊಡೆದರು. ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಇತ್ತು. ಆದ್ರೆ ಆಗ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಟ್ಟರು ಅಂತ ಹೇಳಿದ್ರಾ? ಆಗಲೂ ನಾನು ಕೊಟ್ಟೆ ಅಂತಾನೇ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಎಲ್ಲಾ ರಾಜ್ಯಗಳಿಗೆ ಕೇಂದ್ರ ಒಂದೇ ರೀತಿ ಅಕ್ಕಿ ಕೊಟ್ಟಿದೆ, ಹೆಚ್ಚು ಕೊಡಲಿಲ್ಲ. ಗರೀಬ್ ಕಲ್ಯಾಣ್ ಯೋಜನೆಗೆ ಬಳಸಿ ಉಳಿದ್ರೆ ಮಾರುಕಟ್ಟೆಗೆ ಬಿಡುಗಡೆ ಮಾಡ್ತೀವಿ ಅಂದಿದ್ದಾರೆ. ಆಮ್ ಅದ್ಮೀ ಆರಂಭಿಸಿದೆ. ಬಳಿಕ ಕಾಂಗ್ರೆಸ್ ಈ ಫ್ರೀ ಸ್ಕೀಂ ಜೋಡಿಸಿಕೊಂಡಿದೆ. ನಮ್ಮ ಸರ್ಕಾರ ಆತ್ಮನಿರ್ಭರ ಯೋಜನೆ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ಕೊಡ್ತಿದೆ. ನಮ್ಮ ಓಟ್ ಕಡಿಮೆ ಆಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು, ಆದರೆ ಇದೇ ಜನ ಲೋಕಸಭೆಗೆ ಬಿಜೆಪಿ ಗೆಲ್ಲಿಸಿದ್ರು. ಆಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ನಾವು ಗೆಲ್ಲಲ್ಲ ಅಂದಿದ್ದರು. ಆದರೆ ಜನ ಲೋಕಸಭೆಗೆ ಬಿಜೆಪಿಗೆ ಓಟ್ ಹಾಕಿ ಗೆಲ್ಲಿಸಿದ್ರು. ದೇಶ ಗೆಲ್ಲಬೇಕು ಅನ್ನೋರು ಮೋದಿಯವರನ್ನ ಗೆಲ್ಲಿಸ್ತಾರೆ. ದೇಶ ಹಾಳಾಗಬೇಕು ಅನ್ನೋ ತುಕಡೆ ಗ್ಯಾಂಗ್ ಗಳು ದೇಶ ಸೋಲಬೇಕು ಅಂತಾರೆ ಎಂದರು.
ಹೊಂದಾಣಿಕೆ ರಾಜಕೀಯದ ಬಗ್ಗೆ ನನ್ನದು ನೋ ಕಾಮೆಂಟ್ಸ್. ನಾವು ರಾಜ್ಯದ ಸೋಲು ಒಪ್ಪಿ ಕೊಳ್ತೇವೆ, ಆದರೆ ಹೀನಾಯ ಅಲ್ಲ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿಸಚಿವ ಅರಗ ಜ್ಞಾನೇಂದ್ರ,ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಕೇಶವ ಪ್ರಸಾದ್, ವೇದ ವ್ಯಾಸ ಕಾಮತ್, ಬಿಜೆಪಿ ಪದಾಧಿಕಾರಿಗಳಾದ ಉದಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರ್ ಉಪಸ್ಥಿತರಿದ್ದರು.