ಮಣಿಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿಯವರ ಬೆಂಗಾವಲು ಪಡೆ ವಾಹನ ತಡೆದ ಪೊಲೀಸರು

ಪೊಲೀಸರು ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಪೀಡಿತ ಜನರನ್ನು ಮಾತ್ರ ಭೇಟಿಯಾಗುವುದು ರಾಹುಲ್ ಗಾಂಧಿಯವರ ಉದ್ದೇಶವಾಗಿದೆ. ನಾವು ಸುಮಾರು 20-25 ಕಿ.ಮೀ ಪ್ರಯಾಣಿಸಿದ್ದೇವೆ ಆದರೆ ಎಲ್ಲಿಯೂ ರಸ್ತೆ ನಿರ್ಬಂಧಗಳಿರಲಿಲ್ಲ. ರಾಹುಲ್ ಗಾಂಧಿ ಕಾರಿನೊಳಗೆ ಕುಳಿತಿದ್ದಾರೆ. ಸ್ಥಳೀಯ ಪೊಲೀಸರಿಗೆ ಯಾರು ಸೂಚನೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ

Update: 2023-06-29 11:38 GMT

ಫೊಟೊ- twitter @RajenderBallah

ಇಂಫಾಲ: ಮಣಿಪುರ ಹಿಂಸಾಚಾರದಿಂದ ಹೆಚ್ಚು ತತ್ತರಿಸಿರುವ ಚುರಚಂದಪುರ ಜಿಲ್ಲೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ವಾಹನವನ್ನು ರಾಜ್ಯದ ಪೊಲೀಸರು ಇಂದು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.

ರಾಹುಲ್ ಗಾಂಧಿ ಇಂದು ಬೆಳಗ್ಗೆ ಇಂಫಾಲ್ ಗೆ ಬಂದಿಳಿದರು ಹಾಗೂ ಚುರಚಂದಪುರ ಜಿಲ್ಲೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಅವರನ್ನು ತಡೆಯಲಾಗಿದೆ, ಅಲ್ಲಿ ಅವರು ಪರಿಹಾರ ಶಿಬಿರಗಳಲ್ಲಿ ಜನಾಂಗೀಯ ಕಲಹದಿಂದ ಸ್ಥಳಾಂತರಗೊಂಡ ಜನರನ್ನು ಭೇಟಿ ಮಾಡಲು ಯೋಜಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಜನಾಂಗೀಯ ಕಲಹ ಪ್ರಾರಂಭವಾದಾಗಿನಿಂದ ಸುಮಾರು 50,000 ಜನರು ಈಗ ರಾಜ್ಯದಾದ್ಯಂತ 300 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಲ್ಲಿ ಉಳಿದಿದ್ದಾರೆ

ಮೇ 3 ರಂದು ಮಣಿಪುರದಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಘರ್ಷಣೆಗಳು ಭುಗಿಲೆದ್ದಿತ್ತು.

ರಾಜ್ಯ ರಾಜಧಾನಿ ಇಂಫಾಲ್ ಕಣಿವೆಯಲ್ಲಿ ಹಾಗೂ ಸುತ್ತಮುತ್ತ ವಾಸಿಸುವ ಮೈಟೀಸ್ ಮತ್ತು ಬೆಟ್ಟಗಳಲ್ಲಿ ನೆಲೆಸಿರುವ ಕುಕಿ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

"ಪೊಲೀಸರು ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಪೀಡಿತ ಜನರನ್ನು ಮಾತ್ರ ಭೇಟಿಯಾಗುವುದು ರಾಹುಲ್ ಗಾಂಧಿಯವರ ಉದ್ದೇಶವಾಗಿದೆ. ನಾವು ಸುಮಾರು 20-25 ಕಿ.ಮೀ ಪ್ರಯಾಣಿಸಿದ್ದೇವೆ. ಆದರೆ ಎಲ್ಲಿಯೂ ರಸ್ತೆ ನಿರ್ಬಂಧಗಳಿರಲಿಲ್ಲ. ರಾಹುಲ್ ಗಾಂಧಿ ಕಾರಿನೊಳಗೆ ಕುಳಿತಿದ್ದಾರೆ. ಸ್ಥಳೀಯ ಪೊಲೀಸರಿಗೆ ಯಾರು ಸೂಚನೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News