ಶಾಸಕರು, ಬೆಂಬಲಿಗರನ್ನು ಭೇಟಿಯಾದ ಸಚಿನ್ ಪೈಲಟ್, ಎಲ್ಲರ ಚಿತ್ತ ರಾಜಸ್ಥಾನದತ್ತ

Update: 2023-07-02 06:31 GMT

ಜೈಪುರ: ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಛತ್ತೀಸ್ ಗಢದ ಉಪಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪ್ರತಿಸ್ಪರ್ಧಿ ಟಿಎಸ್ ಸಿಂಗ್ ದೇವ್ ಅವರನ್ನು ಕೊನೆಯ ಕ್ಷಣದಲ್ಲಿ ನೇಮಕ ಮಾಡಿದ ನಂತರ ಎಲ್ಲರ ಕಣ್ಣುಗಳು ಈಗ ರಾಜಸ್ಥಾನದತ್ತ ನೆಟ್ಟಿದೆ.

ಈ ಕ್ರಮವು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಸಚಿನ್ ಪೈಲಟ್ ಅವರಿಗೆ ಪಕ್ಷದಲ್ಲಿ ಹೆಚ್ಚು ಪ್ರಮುಖ ಸ್ಥಾನ ನೀಡುವ ಮೂಲಕ ಪಶ್ಚಿಮ ಗಡಿ ರಾಜ್ಯದಲ್ಲೂ ಶಾಂತಿ ನೆಲೆಸಲು ಕಾಂಗ್ರೆಸ್ ಪ್ರಯತ್ನಿಸಬಹುದು ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ.

ಗಾಂಧಿ ಕುಟುಂಬ ಮಧ್ಯಪ್ರವೇಶಿಸುವ ಮೊದಲು 2021 ರಲ್ಲಿ ಕಾಂಗ್ರೆಸ್ ಸರಕಾರವನ್ನು ಪತನದ ಅಂಚಿಗೆ ತಂದ ಸಿಂಗ್ ದೇವ್ ಅವರನ್ನು ಬುಧವಾರ ತಡರಾತ್ರಿ ಟ್ವೀಟ್ನಲ್ಲಿ ಸಚಿನ್ ಪೈಲಟ್ ಅಭಿನಂದಿಸಿದ್ದಾರೆ.

ಪೈಲಟ್ ಅವರು ದಿಲ್ಲಿಯಿಂದ ಹಿಂದಿರುಗಿದ ನಂತರ ಶಾಸಕರು ಹಾಗೂ ತಮ್ಮ ಬೆಂಬಲಿಗರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದು, ಜೈಪುರದಲ್ಲಿ ರಾಜಕೀಯ ಗರಿಗೆದರಿದೆ. ಪೈಲಟ್ ಅವರು ವಿವೇಚನೆಯಿಂದ ವರ್ತಿಸಿದ್ದರೂ, ಅವರ ಬೆಂಬಲಿಗsaರು ಲವಲವಿಕೆ ತೋರುತ್ತಿದ್ದಾರೆ.

ಇತ್ತೀಚೆಗೆ ತಮ್ಮದೇ ಪಕ್ಷದ ಸಹೋದ್ಯೋಗಿ ಮತ್ತು ಮುಖ್ಯಮಂತ್ರಿಯ ಮೇಲೆ ದಾಳಿಯನ್ನು ಹೆಚ್ಚಿಸಿದ ಪೈಲಟ್, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೇಲಿನ ಒತ್ತಡವನ್ನು ತಗ್ಗಿಸಲು ಮತ್ತು ರಾಜಸ್ಥಾನ ಚುನಾವಣೆಯ ಮೊದಲು ತಮ್ಮ ಜವಾಬ್ದಾರಿಗಳನ್ನು ವಿಸ್ತರಿಸುವುದನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೈಲಟ್ ಏಕವ್ಯಕ್ತಿ ಪ್ರಚಾರ ಹಾಗೂ ತಮ್ಮದೇ ಪಕ್ಷದ ಸರಕಾರದ ಬಗ್ಗೆ ತಿಂಗಳುಗಟ್ಟಲೆ ಪಟ್ಟುಬಿಡದ ಟೀಕೆಗಳು ಕಾಂಗ್ರೆಸ್ ಗೆ ತೀವ್ರ ಮುಜುಗರವನ್ನುಂಟು ಮಾಡಿದೆ.

ಕಾಂಗ್ರೆಸ್ ಆಡಳಿತವಿರುವ 2 ರಾಜ್ಯಗಳಾದ ರಾಜಸ್ಥಾನ, ಛತ್ತೀಸ್ ಗಢ ಮತ್ತು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಈ ವರ್ಷದ ಕೊನೆಯಲ್ಲಿ ಒಂದೇ ಸಮಯದಲ್ಲಿ ಚುನಾವಣೆ ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News