ಬೆಳ್ತಂಗಡಿ: ದಂಪತಿ ನೇಣು ಬಿಗಿದು ಆತ್ಮಹತ್ಯೆ

Update: 2024-09-19 15:36 GMT

ಬೆಳ್ತಂಗಡಿ: ಕಾಶಿಪಟ್ನ ಗ್ರಾಮದ ಉರ್ದುಗುಡ್ಡೆ ಎಂಬಲ್ಲಿ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.

ಸ್ಥಳೀಯ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಹಾಗೂ ಅವರ ಪತ್ನಿ ಬೇಬಿ (46) ಆತ್ಮಹತ್ಯೆ ಮಾಡಿಕೊಂಡವರು.

ತಮ್ಮ ಮನೆಯ ಸಮೀಪದ ಕಾಡಿನಲ್ಲಿ ಇವರಿಬ್ಬರೂ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನೊಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು. ಇದುವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ.

ನೋಣಯ್ಯ ಪೂಜಾರಿಗೆ ಇದು ಎರಡನೇ ಮದುವೆಯಾಗಿದೆ. ಅವರ ಮೊದಲ ಪತ್ನಿ ಹತ್ತು ವರ್ಷದ ಹಿಂದೆ ಮೃತಪಟ್ಟಿದ್ದರು. ಕೆಲವು ವರ್ಷಗಳ ಹಿಂದೆ ಅವರು ಬೇಬಿಯನ್ನು ವಿವಾಹವಾಗಿದ್ದರು. ಮೊದಲನೆ ಪತ್ನಿಗೆ ಐವರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ,  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News