ಕ್ಲಾಸಿಕ್ ಸ್ಪೋಟ್ಸ್೯ ಕ್ಲಬ್‌ನಿಂದ ಎರಡು ದಿನಗಳ ಕ್ರೀಡಾಕೂಟಕ್ಕೆ ಚಾಲನೆ

ಸುಳ್ಯ: ಕ್ಲಾಸಿಕ್ ಸ್ಪೋಟ್ಸ್೯ ಕ್ಲಬ್ ಮುಚ್ಚಿಲ ಇದರ 15ನೇ ವಾಷೀಕೋತ್ಸವದ ಪ್ರಯುಕ್ತ ಎ.5 ಮತ್ತು 6ರಂದು ಎರಡು ದಿನಗಳ ಕಾಲ ಕರಿಕಳ ಶಾಲಾ ಮೈದಾನದಲ್ಲಿ ನಡೆಯುವ ಕ್ರೀಡಾ ಕೂಟ ಮತ್ತು ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶನಿವಾರ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಾಸಿಕ್ ಸ್ಪೋಟ್ಸ್೯ ಕ್ಲಬ್ ಅಧ್ಯಕ್ಷ ಜಮಾಲ್ ಪಡ್ಪಿನಂಗಡಿ ವಹಿಸಿದ್ದರು. ಪಂಜ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಕಲ್ಮಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಸ.ಹಿ.ಪ್ರಾ ಶಾಲೆ ಪಡ್ಪಿನಂಗಡಿ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಸ್. ರಫೀಕ್, ಸ.ಹಿ.ಪ್ರಾ ಶಾಲೆ ಕರಿಕಳ ಎಸ್‌ಡಿಎಂಸಿ ಅಧ್ಯಕ್ಷ ಕುಸುಮಾಧರ ಕೆರೆಯಡ್ಕ, ಸ.ಹಿ.ಪ್ರಾ ಶಾಲೆ ಕರಿಕಳ ಮುಖ್ಯೋಪಾಧ್ಯಾಯ ಚಂದನ್, ಸ.ಹಿ.ಪ್ರಾ. ಶಾಲೆ ಪಡ್ಪಿನಂಗಡಿ ಮುಖ್ಯೋಪಾಧ್ಯಾಯಿನಿ ಧರ್ಮಾವತಿ, ಶ್ರೀ ಸುಬ್ರಾಯ ದೇವಸ್ಥಾನ ಪೈಂದೋಡಿ ವ್ಯವಸ್ಥಾಪನಾ ಅಧ್ಯಕ್ಷ ಕೇಶವ ಗೌಡ ಕುದ್ವ, ಸುಳ್ಯ ತಾಪಂ ಸದಸ್ಯ ಗಫೂರ್ ಕಲ್ಮಡ್ಕ, ಎಣ್ಮೂರು-ಐವತ್ತೂಕ್ಲು ರಹ್ಮಾನಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಇಸ್ಮಾಯೀಲ್ ಪಡ್ಪಿನಂಗಡಿ, ಪಂಜ ಗ್ರಾಪಂ ಸದಸ್ಯರಾದ ಜಗದೀಶ್ ಪುರಿಯ, ದಿವ್ಯಾ ಪುಂಡಿಮನೆ, ಸವಣೂರು ಗ್ರಾಪಂ ಸದಸ್ಯ ರಫೀಕ್ ಎಂ.ಎ., ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಅಶ್ರಫ್ ಮರಕ್ಕಡ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಐವತ್ತೂಕ್ಲು ಗ್ರಾಮಕ್ಕೆ ಸುಸಜ್ಜಿತ ಮೈದಾನ ಮತ್ತು ಕರಿಕಳ ಶಾಲೆಗೆ ಕೌಂಪಾಂಡು ನಿರ್ಮಾಣಕ್ಕಾಗಿ ಶಾಸಕಿಗೆ ಮನವಿ ಸಲ್ಲಿಸಲಾಯಿತು.
ಪಂಜ ಗ್ರಾಪಂ ಮಾಜಿ ಅಧ್ಯಕ್ಷ ರಫೀಕ್ ಸಿಎಂ ಸ್ವಾಗತಿಸಿದರು. ಕ್ಲಾಸಿಕ್ ಸ್ಪೋರ್ಟ್ಸ್ ಅಧ್ಯಕ್ಷ ಜಮಾಲ್ ಪಡ್ಪಿನಂಗಡಿ ವಂದಿಸಿದರು. ಸಾಗರ್ ಕಲ್ಲೊನಿ ಕಾರ್ಯಕ್ರಮ ನಿರೂಪಿಸಿದರು.