ಟಿ20 ವಿಶ್ವಕಪ್ | ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಅಫ್ಘಾನಿಸ್ತಾನ

Update: 2024-06-25 05:51 GMT

x/@toisports

ಕಿಂಗ್ಸ್ಟೌನ್ : ಟಿ20 ವಿಶ್ವಕಪ್ ನ ಸೂಪರ್ 8ರ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಅಫ್ಘಾನಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ರಶೀದ್ ಖಾನ್ ನೇತೃತ್ವದ ಅಫ್ಘಾನಿಸ್ತಾನ ತಂಡವು ಮೊದಲ ಬಾರಿಗೆ ಟಿ20 ಸೆಮಿಫೈನಲ್ ಪ್ರವೇಶಿಸಿದ ಇತಿಹಾಸ ಸೃಷ್ಟಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿತ್ತು.

ಮಳೆ ಭಾದಿತ ಪಂದ್ಯದಲ್ಲಿ ಡಕ್‌ ವರ್ಥ್‌ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಬೇಕಿದ್ದಿದ್ದರೆ ಈ ಗುರಿಯನ್ನು 12.1 ಓವರ್‌ಗಳಲ್ಲಿ ತಲುಪಬೇಕಿತ್ತು. ಬಾಂಗ್ಲಾದೇಶವು 17.5 ಓವರ್‌ಗಳಲ್ಲಿ ಕೇವಲ 105 ರನ್‌ ಗಳಿಸುವಷ್ಟರಲ್ಲಿ ಅಲೌಟ್ ಆಯಿತು. 8 ರನ್‌ನಿಂದ ಸೋಲುವುದರೊಂದಿಗೆ ಸೆಮಿಫೈನಲ್ ಅವಕಾಶ ಕೈತಪ್ಪಿಸಿಕೊಂಡಿತು.

ಈ ಮೂಲಕ ಆಸ್ಟ್ರೇಲಿಯಾವೂ ಟೂರ್ನಿಯಿಂದ ಹೊರಬಿದ್ದಿತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News