ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತರದಾಯಿತ್ವಕ್ಕಾಗಿ ಪೌರ ಸಂಘಟನೆಯಿಂದ ರಾಷ್ಟ್ರವ್ಯಾಪಿ ಅಭಿಯಾನ

Update: 2025-04-12 00:11 IST
ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತರದಾಯಿತ್ವಕ್ಕಾಗಿ ಪೌರ ಸಂಘಟನೆಯಿಂದ ರಾಷ್ಟ್ರವ್ಯಾಪಿ ಅಭಿಯಾನ

Image Courtesy: PTI

  • whatsapp icon

ಹೊಸದಿಲ್ಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತರದಾಯಿತ್ವವನ್ನು ಕೋರಿ ಜನಪರ ಕಾಳಜಿಯ ಪೌರ ಸಂಘಟನೆಗಳು, ನಾಗರಿಕ ಸಾಮಾಜಿಕ ಸಂಘಟನೆ ಹಾಗೂ ತಾಂತ್ರಿಕ ತಜ್ಞರ ಗುಂಪು ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿವೆ. ಭಾರತೀಯ ಚುನಾವಣಾ ಆಯೋಗ (ಇಸಿಐ)ದ ಕಾರ್ಯನಿರ್ವಹಣೆ ಹಾಗೂ ಚುನಾವಣೆ ನಡೆಸುವಲ್ಲಿನ ಪಾರದರ್ಶಕತೆಯ ಕೊರತೆಯ ಕುರಿತು ಅದು ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.

ಈ ವೇದಿಕೆಗಳಿಂದ ಸಂಘಟಿತವಾದ ಗುಂಪು ‘ವೋಟ್ ಫಾರ್ ಡೆಮಾಕ್ರೆಸಿ’ ವಿಸ್ತೃತ ಮನವಿಯೊಂದನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ ಹಾಗೂ ಚುನಾವಣಾ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಮರು ಸ್ಥಾಪಿಸುವ ಉದ್ದೇಶದ 6 ಮುಖ್ಯ ಗುರಿಗಳನ್ನು ಮರು ಉಚ್ಚರಿಸಿದೆ.

ಎಲೆಕ್ಟ್ರಾನಿಕ್ಸ್ ಮತದಾನ ಯಂತ್ರ (ಇವಿಎಂ)ಗಳ ಬಳಕೆಯ ಕುರಿತು ಹೆಚ್ಚುತ್ತಿರುವ ಸಂದೇಹ ಹಾಗೂ ಅದರ ಕಾರ್ಯನಿರ್ವಹಣೆ.ನ್ನು ತಿರುಚಲಾಗುತ್ತಿದೆಯೆಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ (ಮುಖ್ಯವಾಗಿ ಇತ್ತೀಚೆಗೆ ನಡೆದ ಹರ್ಯಾಣ, ಮಹಾರಾಷ್ಟ್ರ ಹಾಗೂ ದಿಲ್ಲಿ ಚುನಾವಣೆಗಳ ಬಳಿಕ) ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಕೆಯಾಗಿದೆ.

ಇಸಿಐಯ ವೆಬ್ ಸೈಟ್ ನಲ್ಲಿ ಶೋಧಿಸಬಹುದಾದ ಡಾಟಾಬೇಸ್ ನಲ್ಲಿ ಹಿಂದಿನ ಹಾಗೂ ಪ್ರಸಕ್ತ ಮತದಾರ ಸಂಪೂರ್ಣ ಪಟ್ಟಿ ಯಾಕೆ ಸಿಗುತ್ತಿಲ್ಲ?

ಚಲಾವಣೆಯಾದ ಮತಗಳ ದಾಖಲೆ ಫಾಮ್ಸ್ 17 ಸಿ ಹಾಗೂ ಇತರ ಒಟ್ಟು ಮತ ಎಣಿಕೆ ದತ್ತಾಂಶ ಡಿಜಿಟಲ್ ಮಾದರಿಯಲ್ಲಿ ಸಾರ್ವಜನಿಕವಾಗಿ ಲಭ್ಯವಿಲ್ಲ ಯಾಕೆ ?

ಮತದಾರರ ಪಟ್ಟಿಗಳಲ್ಲಿ ಮತದಾರರ ಹೆಸರುಗಳ ಸೇರ್ಪಡೆ ಹಾಗೂ ಅಳಿಸುವಿಕೆಯನ್ನು ದಾಖಲಿಸುವ ಫಾರ್ಮ್ 9, 10, 11, 11ಎ ಹಾಗೂ 11ಬಿ ಇವುಗಳ ಪ್ರಕಟಣೆಯಲ್ಲಿ ಪಾರದರ್ಶಕತೆ ಇಲ್ಲ ಯಾಕೆ ?

► ಸಾಫ್ಟ್ ವೇರ್ ಸಮಗ್ರತೆಯ ಖಾತರಿ ನೀಡಲು ಇವಿಎಂ ಸೋರ್ಸ್ ಕೋಡ್ ಸಾರ್ವಜನಿಕರ ಪರಿಶೀಲನೆಗೆ ಮುಕ್ತವಾಗಿಲ್ಲ ಯಾಕೆ ?

► ಸ್ವತಂತ್ರ ತಾಂತ್ರಿಕ ತಜ್ಞರ ಮೇಲುಸ್ತುವಾರಿಯಲ್ಲಿ ಸಿಂಬಲ್ ಲೋಡಿಂಗ್ ಯೂನಿಟ್ (ಎಸ್ಎಲ್ಯು) ಅನ್ನು ಸಂಪೂರ್ಣವಾಗಿ ಯಾಕೆ ಪ್ರದರ್ಶಿಸುತ್ತಿಲ್ಲ?

► ವಿ.ವಿ. ಪಾಟ್ ಸ್ಲಿಪ್ ಗಳನ್ನು ಯಾಕೆ ಸಂಪೂರ್ಣವಾಗಿ ಎಣಿಕೆ ಮಾಡುತ್ತಿಲ್ಲ?

► ಮತದಾರರು ತಾವಾಗಿಯೇ ಸ್ಲಿಪ್ ಅನ್ನು ಪರಿಶೀಲಿಸಲು ಹಾಗೂ ಜಮಾ ಮಾಡಲು ಯಾಕೆ ಸಾಧ್ಯವಿಲ್ಲ ?

► ಮೊದಲಾದ ಪ್ರಶ್ನೆಗಳನ್ನು ಮನವಿಯಲ್ಲಿ ಕೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News