ಬುಡಕಟ್ಟು ಹಕ್ಕುಗಳು ,ಪದ್ಧತಿಗಳ ಮೇಲೆ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆ ಪರಿಣಾಮ ಬೀರುವುದಿಲ್ಲ: ಕೇಂದ್ರ ಸಚಿವ ಎಸ್.ಪಿ. ಸಿಂಗ್ ಬಘೇಲ್

Update: 2023-07-05 07:26 GMT

Photo: Twitter@NDTV

ಹೊಸದಿಲ್ಲಿ: ಈಶಾನ್ಯ ಮತ್ತು ದೇಶದ ಇತರ ಭಾಗಗಳಲ್ಲಿನ ಬುಡಕಟ್ಟು ಹಕ್ಕುಗಳು ಹಾಗೂ ಪದ್ಧತಿಗಳ ಮೇಲೆ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರಿಣಾಮ ಬೀರುವುದಿಲ್ಲ ಎಂದು ಇತ್ತೀಚೆಗೆ ಆರೋಗ್ಯ ಸಚಿವಾಲಯಕ್ಕೆ ವರ್ಗಾವಣೆಗೊಂಡಿರುವ ಮಾಜಿ ಕಿರಿಯ ಕಾನೂನು ಸಚಿವ ಎಸ್.ಪಿ. ಸಿಂಗ್ ಬಘೇಲ್ ಹೇಳಿದ್ದಾರೆ. .

ಯುಸಿಸಿ ಕುರಿತಾಗಿ ಜನರಿಗೆ ಈ ಭರವಸೆಯನ್ನು ನೀಡಿಸಿದ ಸರ್ಕಾರದ ಮೊದಲ ಸದಸ್ಯರಾದರು.

ಬಿಜೆಪಿಯು ಬುಡಕಟ್ಟು ಸಮುದಾಯಗಳ ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು ಅವರ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ಕಾನೂನನ್ನು ಹೇರುವುದಿಲ್ಲ ಎಂದು ಈಗ ಆರೋಗ್ಯ ಖಾತೆಯ ರಾಜ್ಯ ಸಚಿವರಾಗಿರುವ ಬಘೆಲ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

"ಬಿಜೆಪಿಯು ದೇಶದ ಅತ್ಯುನ್ನತ ಹುದ್ದೆಯಾದ ಭಾರತದ ರಾಷ್ಟ್ರಪತಿಯಾಗಿ ಬುಡಕಟ್ಟು ಮಹಿಳೆಯನ್ನು ನಾಮನಿರ್ದೇಶನ ಮಾಡಲು ಆಯ್ಕೆ ಮಾಡಿತ್ತು. ಇದು ಅತಿ ಹೆಚ್ಚು ಬುಡಕಟ್ಟು ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ಮಂತ್ರಿಗಳನ್ನು ಹೊಂದಿದೆ. ಈಶಾನ್ಯದ ಸಂಪ್ರದಾಯಗಳನ್ನು ಪಕ್ಷವು ಗೌರವಿಸುತ್ತದೆ. ಮತ್ತು ನಾವು ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಪದ್ಧತಿಗಳನ್ನು ನೋಯಿಸುವುದಿಲ್ಲ, ಆದರೆ ತುಷ್ಟೀಕರಣ ರಾಜಕಾರಣವೂ ಸರಿಯಲ್ಲ" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News