ಶಮಿ ದಾಳಿ, ಸೆಮಿಗೆ ಭಾರತ!

Update: 2023-10-29 16:16 GMT
Photo : cricketworldcup.com

ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಎಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 100 ರನ್ ಗಳ ಗೆಲುವು ಸಾಧಿಸಿದೆ. ಆ ಮೂಲಕ ಭಾರತದ ಸೆಮಿ ಫೈನಲ್‌ ಹಾದಿ ಹತ್ತಿರವಾಗಿದೆ.

ನಾಯಕ ರೋಹಿತ್ ಶರ್ಮಾ ಜವಾಬ್ದಾರಿಯು ಬ್ಯಾಟಿಂಗ್ ಹಾಗೂ ಶಮಿ-ಬುಮ್ರಾ ಜೋಡಿಯ ಬೌಲಿಂಗ್ ಕಮಾಲ್ ನಿಂದ ಭಾರತ ವಿಶ್ವಕಪ್ ಟೂರ್ನಿ ಯಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಪರಿಣಾಮ ಅಂಕ ಪಟ್ಟಿಯಲ್ಲಿ ಭಾರತ ಮತ್ತೆ ಮೊದಲನೇ ಸ್ಥಾನಕ್ಕೆರಿದೆ. ಈ ಹೀನಾಯ ಸೋಲಿನೊಂದಿಗೆ ಇಂಗ್ಲೆಂಡ್ ಸೆಮೀಸ್ ಆಸೆ ಭಗ್ನ ಗೊಂಡು ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.

ಈ ಮೊದಲು ಬ್ಯಾಟ್ ಬೀಸಿದ್ದ ಭಾರತ ತಂಡ ಇಂಗ್ಲೆಂಡ್ ಗೆ 230 ರನ್ ಸಾಧಾರಣ ಗುರಿ ನೀಡಿತ್ತು. ಈ ಅಲ್ಪ ಗುರಿ ಬೆನ್ನತ್ತಿದ ಇಂಗ್ಲೆಂಡ್ ಅಕ್ಷರಶಃ ಆಘಾತ ಎದುರಿಸಿತು. ಭಾರತೀಯ ಬೌಲರ್ ಗಳ ಸಂಘಟಿತ ದಾಳಿ ಗೆ ಬೆದರಿದ ಇಂಗ್ಲೆಂಡ್ ತಂಡ , 52 ಗಳಿಸುವಷ್ಟರಲ್ಲಿಯೇ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು.

ಭಾರತದ ಆಕ್ರಮಣಕಾರಿ ಬೌಲಿಂಗ್ ಗೆ ಜೊ ರೂಟ್ ಹಾಗೂ ಬೆನ್ ಸ್ಟೋಕ್ಸ್ ಖಾತೆ ತೆರೆಯದೆಯೇ ಶೂನ್ಯ ಕ್ಕೆ ಕ್ರಮವಾಗಿ ಬುಮ್ರಾ- ಶಮಿ ಜೋಡಿಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಓಪನರ್ಸ್ ಜಾನಿ ಬೈರ್ ಸ್ಟೋವ್ 14 ರನ್ ಗೆ ಮುಹಮ್ಮದ್ ಶಮಿ ಬೌಲಿಂಗ್ ನಲ್ಲಿ ಬೌಲ್ಡ್ ಆದರೆ ಡೇವಿಡ್ ಮಲನ್ 16 ರನ್ ಗೆ ಜಸ್ಪ್ರಿತ್ ಬುಮ್ರಾ ಗೆ ಬೌಲ್ಡ್ ಆದರು. ಜವಾಬ್ದಾರಿ ಯುತ ಬ್ಯಾಟಿಂಗ್ ನಿರ್ವಹಿಸ ಬೇಕಿದ್ದ ನಾಯಕ ಜೋಸ್ ಬಟ್ಲರ್ 10 ರನ್ ಗೆ ಕುಲ್ ದೀಪ್ ಯಾದವ್ ಗೆ ವಿಕೆಟ್ ನೀಡುವುದರೊಂದಿಗೆ ಟೂರ್ನಿ ಯಲ್ಲಿ ಸತತ ವೈಫಲ್ಯ ಕಂಡರು. ಅನುಭವಿ ಬ್ಯಾಟರ್ ಮೊಯಿನ್ ಅಲಿ 15 ರನ್ ಗೆ ಇನ್ನಿಂಗ್ಸ್ ಮುಗಿಸಿದರೆ ತಂಡದ ಪರ ಲಿಯಾಮ್ ಲಿವಿಂಗ್ ಸ್ಟೋನ್ ಬಾರಿಸಿದ 27 ರನ್ ಗರಿಷ್ಟ ಮೊತ್ತ ವಾಗಿತ್ತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 10 , ಡೇವಿಡ್ ವಿಲ್ಲಿ 16 ,ಅದಿಲ್ ರಶೀದ್ 13, ಮಾರ್ಕ್ ವುಡ್ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಇಂಗ್ಲೆಂಡ್ 129 ಕ್ಕೆ ಆಲೌಟ್ ಆಯಿತು.

ಭಾರತದ ಪರ ಮುಹಮ್ಮದ್ ಶಮಿ 4 ವಿಕೆಟ್ ಪಡೆದರು. ಜಸ್ಪ್ರಿತ್ ಬುಮ್ರಾ 3 ವಿಕೆಟ್ ಪಡೆದರು. ಕುಲ್ದೀಪ್ ಯಾದವ್ 2, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ಭಾರತದ ವಿರುದ್ದ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಇತ್ತ ಬ್ಯಾಟಿಂಗ್ ಬಂದ ಭಾರತ ನಿರೀಕ್ಷಿತ ಆರಂಭ ಪಡೆಯುವಲ್ಲಿ ಎಡವಿತು.ಕೇವಲ 40 ರನ್ ಗೆ ಭಾರತ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.ಭಾರತದ ಪರ ಶುಬ್ ಮನ್ ಗಿಲ್ 9 ರನ್ ಗೆ ಕ್ರಿಸ್ ವೋಕ್ಸ್ ಬೌಲಿಂಗ್ ನಲ್ಲಿ ಔಟ್ ಆದರೆ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಡೇವಿಡ್ ವಿಲ್ಲಿ ಬೌಲಿಂಗ್ ನಲ್ಲಿ ಸ್ಟೋಕ್ಸ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಶ್ರೇಯಸ್ ಐಯ್ಯರ್ 4 ರನ್ ಗಳಿಸಿದರು. ಮೂರು ವಿಕೆಟ್ ಬೇಗ ಪತನದ ನುಡುವೆಯೂ ಇಂಗ್ಲಂಡ್ ಆಕ್ರಮಣಕಾರಿ ಬೌಲಿಂಗ್ ಎದುರು ಭಾರತ ಪರ ಏಕಾಂಗಿ ಜವಾಬ್ದಾರಿಯುತ ಬ್ಯಾಟಿಂಗ್ ನಿರ್ವಹಿಸಿದ ನಾಯಕ ರೋಹಿತ್ ಶರ್ಮಾ ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಕಟ್ಟು ವ ಪ್ರಯತ್ನ ಮಾಡಿದರು ಅವರಿಗೆ ಕೆ ಎಲ್ ರಾಹುಲ್ 39 ರನ್ ಗಳಿಸಿ ಸಾಥ್ ನೀಡುವ ಪ್ರಯತ್ನ ಮಾಡಿದರಾದರೂರು ಅವರು ಹೆಚ್ಚು ಸಮಯ ನಿಲ್ಲಲಿಲ್ಲ.

ನಾಯಕ ರೋಹಿತ್ ಶರ್ಮಾ 101 ಎಸೆತ ಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಿತ 87 ರನ್ ಬಾರಿಸಿ ಮಾಡುತ್ತದ್ದ ಸಂದರ್ಭ ರಶೀದ್ ಬೌಲಿಂಗ್ ನಲ್ಲಿ ದೊಡ್ಡ ಮೊತ್ತ ಪೇರಿಸಲು ಹೋಗಿ ಲಿಯಾಮ್ ಲಿವಿಂಗ್ ಸ್ಟೋನ್ ಹಿಡಿದ ಅದ್ಬುತ ಕ್ಯಾಚ್ ಗೆ ಔಟ್ ಆದರು. ರೋಹಿತ್ ವಿಕೆಟ್ ಪತನ ನಂತರ ಭಾರತಕ್ಕೆ ಹೆಚ್ಚು ರನ್ ಬರಲಿಲ್ಲ. ಬಳಿಕ ಕುಂಟುತ್ತಾ ಸಾಗಿದ ಭಾರತ 229 ರನ್ ಪೇರಿಸಿತು. ಸೂರ್ಯ ಕುಮಾರ್ ಯಾದವ್ 49, ರವೀಂದ್ರ ಜಡೇಜಾ 8 ಮುಹಮ್ಮದ್ ಶಮಿ 1 , ಬುಮ್ರಾ 16 ರನ್ ಗಳಿಸಿದರು.

ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ವಿಕೆಟ್ ಪಡೆದುಕೊಂಡರೆ ಕ್ರಿಸ್ ವೂಕ್ಸ್ , ಅದಿಲ್ ರಶೀದ್ 2 , ಹಾಗೂ ಮಾರ್ಕ್ ವುಡ್ ಒಂದು ವಿಕೆಟ್ ಕಬಳಿಸಿದರು

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News