ಉಡುಪಿ: ಡಿ.6ರಿಂದ ವಾದಿರಾಜ ಕನಕದಾಸ ಸಂಗೀತೋತ್ಸವ

Update: 2024-12-04 13:18 GMT

ಉಡುಪಿ, ಡಿ.4: 46ನೇ ವರ್ಷದ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮವು ಡಿಸೆಂಬರ್ 6,7 ಮತ್ತು 8ರಂದು ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ ಕಾಲೇಜು ಉಡುಪಿ ಹಾಗೂ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯಗಳು ಸಂಯುಕ್ತವಾಗಿ ಸಂಘಟಿಸಿವೆ.

ಡಿ.6ರಂದು ಸಂಜೆ 4 ಗಂಟೆಗೆ ಟಿ.ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಟಿ.ರಂಗ ಪೈ ಕಾರ್ಯ ಕ್ರಮವನ್ನು ಉದ್ಘಾಟಿಸ ಲಿದ್ದಾರೆ. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಪ್ರಾಚಾರ್ಯ ಡಾ.ಅನಿಲ್ ಕುಮಾರ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಲಿದ್ದು, ಸಂಜೆ 5:30ರಿಂದ ಕರ್ನಾಟಕ ಕಲಾಶ್ರೀ ತಿರುಮಲೈ ಶ್ರೀನಿವಾಸ ಬೆಂಗಳೂರು ಬಳಗದಿಂದ ಸಂಗೀತ ಕಚೇರಿ ನಡೆಯಲಿದೆ.

ಡಿ.7ರ ಶನಿವಾರ ಬೆಳಗ್ಗೆ 9:30ರಿಂದ ಮಂಜುಳಾ ಸುಬ್ರಹ್ಮಣ್ಯ ಮಂಚಿ ಮತ್ತು ಸರ್ಪಂಗಳ ಈಶ್ವರಭಟ್‌ರಿಂದ ಕನಕದಾಸರ ಮೋಹನ ತರಂಗಿಣಿಯ ಅಯ್ದ ಭಾಗಗಳ ವಾಚನ-ವ್ಯಾಖ್ಯಾನ, 10:30ರಿಂದ ಶ್ರೇಯಾ ಕೊಳತ್ತಾಯ ಬಳಗದಿಂದ ಸಂಗೀತ ಕಚೇರಿ, ಅಪರಾಹ್ನ 1:30ರಿಂದ ವಾದಿರಾಜ ಕನಕದಾಸ ಕೀರ್ತನಾ ಸ್ಪರ್ಧೆ, ಸಂಜೆ 4:30ರಿಂದ ಪೊಳಲಿ ಜಗದೀಶ ದಾಸರು ಮತ್ತು ಬಳಗದಿಂದ ಸಂತ ಕನಕದಾಸ ಹರಿಕಥಾ ಕಾಲಕ್ಷೇಪ ಕಾರ್ಯಕ್ರಮ ನಡೆಯಲಿದೆ.

ಡಿ.8ರ ರವಿವಾರ ವಾದಿರಾಜ ಕನಕದಾಸ ಕೀರ್ತನ ಶಿಬಿರ, ಸಂಜೆ 4:30ಕ್ಕೆ ಸಮಾರೋಪ, ಕನಕ ಕೀರ್ತನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಂಜೆ 5:30ರಿಂದ ಮಂಜುನಾಥ ಭಟ್ ಮತ್ತು ಬಳಗದಿಂದ ಹಿಂದೂಸ್ಥಾನಿ ಗಾಯನ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News