ಎಂಜಿಎಂ ಸಂಧ್ಯಾ ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ
Update: 2024-12-04 15:39 GMT
ಉಡುಪಿ, ಡಿ.4: ಪ್ರತಿಭೆ, ಕಾರ್ಯಕ್ಷಮತೆ, ಸಾಮರ್ಥ್ಯವುಳ್ಳವರಿಗೆ ಮುಕ್ತ ಅವಕಾಶ ಸಿಗಬೇಕು ಎಂದು ಹಿರಿಯ ಪತ್ರಕರ್ತೆ ಸಂಧ್ಯಾ ಎಸ್. ಪೈ ಹೇಳಿದ್ದಾರೆ.
ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ವಾರ್ಷಿಕ ಸಂಚಿಕೆ ‘ಸಾರಥಿ’ಯನ್ನು ಬುಧವಾರ ಕಾಲೇಜು ಆವರಣದ ನೂತನ ರವೀಂದ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅರ್ಥವಾಗದ, ದೊಡ್ಡ ಶಬ್ದಕ್ಕಿಂತ ಎಲ್ಲರ ಮನ ಮುಟ್ಟುವಂತೆ, ಸರಳವಾಗಿ ಬರೆಯಬೇಕು. ದಿನಚರಿ ಬರೆಯೋ ಅಭ್ಯಾಸದಿಂದ ಮನದ ತುಮುಲಗಳನ್ನು ಬಿಚ್ಚಿಡಬಹುದು ಎಂದರು.
ಎಂಜಿಎಂ ಕಾಲೇಜು ಪ್ರಿನ್ಸಿಪಾಲ್ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಅಕಾಡೆಮಿ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ, ಟಿ.ಮೋಹನದಾಸ್ ಪೈ ಕೌಶಲ್ಯ ಕೇಂದ್ರದ ನಿರ್ದೇಶಕ ಟಿ.ರಂಗ ಪೈ, ಎಂಜಿಎಂ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಮಾಲತಿ ದೇವಿ ಉಪಸ್ಥಿತರಿದ್ದರು. ಎಂಜಿಎಂ ಸಂಧ್ಯಾ ಕಾಲೇಜು ಪ್ರಿನ್ಸಿಪಾಲ್ ಡಾ. ದೇವಿದಾಸ ನಾಯ್ಕ ಸ್ವಾಗತಿಸಿದರು. ದಿಶಾ ನಿರೂಪಿಸಿದರು. ದೀಪಿಕಾ ವಂದಿಸಿದರು.