ವೃದ್ಧೆ ಆತ್ಮಹತ್ಯೆ
Update: 2024-12-04 16:15 GMT
ಹೆಬ್ರಿ: ಬೆನ್ನುನೋವು, ಮೊಣಕಾಲು ನೋವು ಹಾಗೂ ಸೊಂಟ ನೋವಿನಿಂದ ಬಳಲುತಿದ್ದು, ಆರೋಗ್ಯ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡ ಜಲಜಾ (82) ಎಂಬ ವೃದ್ಧೆ ನಿನ್ನೆ ಅಪರಾಹ್ನ 2.30ರ ಸುಮಾರಿಗೆ ಹೆಬ್ರಿಯ ತಮ್ಮ ಮನೆಯ ಚಾವಡಿಯಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.