ಜ.17ರಿಂದ ಕಟಪಾಡಿ ದರ್ಗಾ ಉರೂಸ್ ಆರಂಭ
Update: 2025-01-14 12:49 GMT
ಕಾಪು, ಜ.14: ಕಟಪಾಡಿ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾಹಿ (ಖ.ಸಿ.) ರವರ ಉರೂಸ್ ಯಾನೆ ಝಿಯಾರತ್ ಸಮಾರಂಭ ಜ.17ರಿಂದ 19ರವರೆಗೆ ನಡೆಯಲಿದೆ.
ಜ.17ರಂದು ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಇಶಾ ನಮಾಝಿನ ಬಳಿಕ ಮುಹಮ್ಮದೀಯ ಮೊಹಲ್ಲಾ ಮಲ್ಲಾರು ಇಲ್ಲಿನ ಮೌಲಾನಾ ಲುಕ್ಮಾನ್ ರಝಾ ಮಿಸ್ಬಾಹಿ ಉದ್ಘಾಟನಾ ಭಾಷಣ ಮಾಡಲಿ ದ್ದಾರೆ. ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್‌ನ ನೇತೃತ್ವ ವನ್ನು ಅಸ್ಸಯ್ಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಜಲಾಲಿಯ್ಯ ವಹಿಸಲಿದ್ದಾರೆ.
ಜ.18ರ ಶನಿವಾರ ಸಂಜೆ ಮಗ್ರಿಬ್ ನಮಾಝಿನ ಬಳಿಕ ಸಂದಲ್ ಮೆರವಣಿಗೆ ನಡೆಯಲಿದೆ. ಇಶಾ ನಮಾಝಿನ ಬಳಿಕ ಸಮಾರೋಪದಲ್ಲಿ ವಾಗ್ಮಿ ಮುಹಮ್ಮದ್ ಅಝ್ಹರಿ ಪೇರೊಡ್ ದಿಕ್ಸೂಚಿ ಭಾಷಣ ಮಾಡಲಿರುವರು. ಜ.19ರಂದು ಬೆಳಿಗ್ಗೆ 9.30ರಿಂದ ಮೌಲೀದ್ ಮಜ್ಲಿಸ್ ನಡೆಯಲಿದ್ದು, ನಂತರ ಅನ್ನದಾನ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.