ಸ್ಕಾಲಪ್‌ಶಿಪ್‌ನಿಂದ ವಾಗ್ಜ್ಯೋತಿ ಶಾಲೆಗೆ ಕೊಡುಗೆ ನೀಡಿದ ವಿದ್ಯಾರ್ಥಿನಿ

Update: 2024-08-29 14:14 GMT

ಕುಂದಾಪುರ, ಆ.29: ತಾನು ಕಾಲೇಜಿನಲ್ಲಿ ಕಲಿಯುವಾಗ ಗಳಿಸಿದ ಸ್ಕಾಲರ್‌ಶಿಪ್ ಹಣವನ್ನು ಉಳಿಕೆ ಮಾಡಿ ತನ್ನ ಹುಟ್ಟು ಹಬ್ಬದಂದು ಅಂಪಾರು ಮೂಡುಬಗೆಯಲ್ಲಿರುವ ’ವಾಗ್ಜ್ಯೋತಿ’ ಶ್ರವಣದೋಶವುಳ್ಳ ಮಕ್ಕಳ ವಸತಿ ಶಾಲೆಗೆ ಉಪಕರಣವನ್ನು ವಿದ್ಯಾರ್ಥಿನಿಯೊಬ್ಬರು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.

ಇಂಜಿನಿಯರ್ ಆಗಿರುವ ಪ್ರಶಾಂತ್ ಮೊಳಹಳ್ಳಿ, ವೈದ್ಯೆ ಡಾ.ರಾಜೇಶ್ವರಿ ಅವರ ಪುತ್ರಿ ರೋಶನಿ ಎಂ.ಪಿ. ಆ.29ರಂದು ಜನ್ಮದಿನದ ಪ್ರಯುಕ್ತ ವಾಗ್ಜ್ಯೋತಿ ವಸತಿ ಶಾಲೆಗೆ 50 ಸಾವಿರ ಮೌಲ್ಯದ ಸಮೂಹ ಶ್ರವಣ ಯಂತ್ರ (ಗ್ರೂಫ್ ಹಿಯರಿಂಗ್ ಏಯ್ಡ್) ಎಂಬ ಸಾಧನವನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರು ಉಡುಪಿ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು ಈ ಬಾರಿ ಪಿಸಿಎಂಬಿ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದರು.

ನಿವೃತ್ತ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಉಪಕರಣ ಉದ್ಘಾಟಿಸಿ ಶುಭಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಎಚ್. ಉಪಕರಣವನ್ನು ಸ್ವೀಕರಿಸಿದರು. ವಿದ್ಯಾರ್ಥಿನಿ ಪೋಷಕರಾದ ಪ್ರಶಾಂತ್ ಮೊಳಹಳ್ಳಿ, ಡಾ. ರಾಜೇಶ್ವರಿ, ನಿರ್ಮಲಾ, ಮೊಳಹಳ್ಳಿ- ಹುಣ್ಸೆಮಕ್ಕಿಯ ಶಿವಶಾಂತಿ ಲಯನ್ಸ್ ಕ್ಲಬ್ ಅಧ್ಯಕ್ಷ ಯು.ಎಸ್.ಮೋಹನದಾಸ್ ಶೆಟ್ಟಿ, ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಕೋಶಾಧಿಕಾರಿ ದಯಾನಂದ ಎಂ., ಸದಸ್ಯರಾದ ಎಸ್. ರತ್ನಾಕರ ಶೆಟ್ಟಿ, ಅನಿಲಕುಮಾರ್ ಶೆಟ್ಟಿ, ಕರುಣಾ ಕರ ಶೆಟ್ಟಿ, ಶಂಭುಶಂಕರ್ ಶೆಟ್ಟಿ ಮೊಳಹಳ್ಳಿ, ಸ್ಥಳೀಯರಾದ ವಸಂತಿ ಎಂ. ಶೆಟ್ಟಿ ಮೊಳಹಳ್ಳಿ, ವಾಗ್ಜ್ಯೋತಿ ಶಾಲೆಯ ಶಿಕ್ಷಕಿಯ ರಾದ ಸತ್ಯಪ್ರಸನ್ನ, ರಾಜೇಶ್ವರಿ, ಪ್ರಮಿಳಾ, ರೆಜಿನಾ, ಶೈಲಾ ನಾಯಕ್, ಶ್ರೀಕಲಾ, ವಾರ್ಡನ್ ರಾಧಿಕಾ ಭಂಡಾರಿ, ಸಿಬ್ಬಂದಿಗಳಾದ ಮಂಚಲಾ, ಸವಿತಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News