ಹೊಳೆಗೆ ಬಿದ್ದು ಮಹಿಳೆ ಮೃತ್ಯು

Update: 2023-07-23 15:57 GMT

ಹಿರಿಯಡ್ಕ, ಜು.23: ಮಹಿಳೆಯೊಬ್ಬರು ಕಾಲುಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕುರುಂಬಿಲು(80) ಎಂದು ಗುರುತಿಸಲಾಗಿದೆ. ಇವರು ಜು.11ರಂದು ಅಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದು, ಜು.22ರಂದು ರಾತ್ರಿ ವೇಳೆ ಇವರ ಮೃತದೇಹವು ಪೆರ್ಡೂರು ಗ್ರಾಮದ ಕುಕ್ಕಂಜಾರು ಅಣ್ಣಾಲು ಹೊಳೆಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News