ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಸರಕಾರಿ ಯೋಜನೆಗಳಿಗೆ ಆಧಾರ್ ಜೋಡಣೆ ಸೌಲಭ್ಯ

Update: 2023-08-17 13:26 GMT

ಉಡುಪಿ, ಆ.17: ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳಿಗೆ ಆಧಾರ್ ಜೋಡಣೆ ಸೌಲಭ್ಯ ವನ್ನು ಪರಿಚಯಿಸಿದ್ದು, ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಾಯಧನ, ಪಿಂಚಣಿ ಅಥವಾ ಯಾವುದೇ ಯೋಜನೆಗಳ ಮೊತ್ತವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಈ ಹಿಂದೆ ರಾಷ್ಟ್ರೀಕೃತ ಅಥವಾ ಖಾಸಗಿ ರಂಗದ ಬ್ಯಾಂಕುಗಳಲ್ಲಿ ಮಾತ್ರ ಲಭ್ಯವಿದ್ದ ಈ ಸೌಲಭ್ಯವನ್ನು ನೀಡುತ್ತಿರುವ ಕರಾವಳಿ ಕರ್ನಾಟಕದ ಪ್ರಪ್ರಥಮ ಪಟ್ಟಣ ಸಹಕಾರ ಬ್ಯಾಂಕ್ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಆಗಿದೆ.

ಇದರಲ್ಲಿ ಈಗಾಗಲೇ ಖಾತೆ ಹೊಂದಿರುವವರು ಅಥವಾ ಹೊಸ ಖಾತೆ ತೆರೆಯಲಿಚ್ಛಿಸುವ ಗ್ರಾಹಕರು ತಮ್ಮ ಆಧಾರ್‌ನ್ನು ನಮ್ಮ ಬ್ಯಾಂಕಿನಲ್ಲಿಯೇ ಖಾತೆಗೆ ಜೋಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಈಗಾಗಲೇ ವಿವಿಧ ತಂತ್ರಜ್ಞಾನ ಆಧಾರಿತ ಸೇವೆಗಳಾದ ಆರ್‌ಟಿಜಿಎಸ್/ನೆಫ್ಟ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ, ಎಸ್‌ಎಂಎಸ್ ಅಲರ್ಟ್, ಯುಪಿಐ ಆಧಾರಿತ ಪಾವತಿಯ ಸೇವೆ (ಭೀಮ್)ಗಳನ್ನು ನೀಡುತ್ತಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News