ಈಸಿಆರ್ ಸಂಸ್ಥೆಯಲ್ಲಿ ಅವ್ಯವಹಾರ ಆರೋಪ: ಮಧು ಭಾಸ್ಕರ್ ವಿರುದ್ಧ ಕಾನೂನು ಕ್ರಮಕ್ಕೆ ಅಧ್ಯಕ್ಷೆ ಮಹಿಮಾ ಆಗ್ರಹ

Update: 2023-10-19 13:44 GMT

ಉಡುಪಿ: ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿಯಲ್ಲಿರುವ ಈಸಿಆರ್ ಸಂಸ್ಥೆಗೆ ಚೇಯರ್‌ಮೆನ್ ಆಗಿ ಮಧು ಟಿ.ಭಾಸ್ಕರ್ ನಡೆಸಿದ ಅವ್ಯವಹಾರಗಳ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಅದರಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ಈಸಿಆರ್ ಟ್ರಸ್ಟ್‌ನ ಅಧ್ಯಕ್ಷೆ ಮಹಿಮಾ ಮಧು ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಟ್ರಸ್ಟ್ ಸ್ಥಾಪನೆಯಾಗಿದ್ದು, ಅದರ ಅಧೀನದಲ್ಲಿ 2014ರಿಂದ ಕಾರ್ಯಚರಿಸುತ್ತಿರುವ ಈಸಿಆರ್ ಗ್ರೂಪ್ ಆಫ್ ಇಸ್ಟಿಟ್ಯೂಶನ್ ಅಧ್ಯಕ್ಷರು ಮತ್ತು ಚೇಯರ್‌ಮೆನ್ ಆಗಿ ಮಧು ಟಿ.ಭಾಸ್ಕರ್ ಕಾರ್ಯನಿರ್ವಹಿಸುತ್ತಿದ್ದರು. ಕಾಲೇಜಿನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಅವರು, ಸಂಸ್ಥೆಯ ಬೈಲಾ ಮೀರಿ ಇತರ ಕೆಲವರನ್ನು ಸಂಸ್ಥೆಯ ಸದಸ್ಯರನ್ನಾಗಿ ಮಾಡಿದ್ದರು ಎಂದು ದೂರಿದರು.

ಸಂಸ್ಥೆಯಲ್ಲಿ ಸೆಕ್ಟೆಟರಿ ಆಗಿದ್ದ ನನ್ನನ್ನು ಆಡಳಿತ ಸಭೆಗೆ ಹಾಜರಾಗದೇ ಇದ್ದರೂ ಕೂಡ ಮಧು ನನ್ನ ಸಹಿ ನಕಲಿ ಮಾಡಿ ಪೋಜರಿ ದಾಖಲೆಗಳನ್ನು ಸೃಷ್ಠಿಸಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿದ್ದಾರೆ. ಅಲ್ಲದೆ ಸಂಸ್ಥೆಗೆ ಹೊಸದಾಗಿ ನೇಮಿಸಿಕೊಂಡ ಸದಸ್ಯರಿಂದ ಬಹಳಷ್ಟು ಕೋಟಿ ಹಣವನ್ನು ಸಂಗ್ರಹಿಸಿ ಶೇ.50ರಷ್ಟು ಪಾಲುದಾರಿಕೆ ಕೊಡುವುದಾಗಿ ನಂಬಿಸಿದ್ದಾರೆ. ಇವರು ಸಂಸ್ಥೆಯ ಹಣವನ್ನು ಯಾರ ಗಮನಕ್ಕೂ ತಾರದೇ ಸಂಸ್ಥೆಯ ಹಣವನ್ನು ದುರುಪಯೋಗ ಪಡಿಸಿ ಕೊಂಡಿದ್ದಾರೆ. ಹೀಗೆ ಕೋಟ್ಯಂತರ ರೂ. ಹಣವನ್ನು ದುರುಪಯೋಗ ಮಾಡ ಲಾಗಿದೆ ಎಂದು ಆರೋಪಿಸಿದರು.

ಈ ಎಲ್ಲ ಕಾರಣಗಳಿಂದ ಆರೋಪಿ ಮಧು ಭಾಸ್ಕರ್ ಅವರನ್ನು ಸಂಸ್ಥೆಯಿಂದ ಶಾಶ್ವತವಾಗಿ ವಜಾ ಮಾಡಲಾಗಿದೆ. ಈಗ ಸಂಸ್ಥೆಯ ಅಧ್ಯಕ್ಷೆ ನಾನಾಗಿದ್ದೇನೆ. ಆದರೂ ಮಧು ಭಾಸ್ಕರ್ ನನಗೆ ಜೀವ ಬೆದರಿಕೆಯೊಡ್ಡಿ ಕಾಲೇಜಿಗೆ ಬಾರದಂತೆ ತಡೆಯುತ್ತಿದ್ದಾರೆ. ಈ ಸಂಬಂಧ ಅ.೨೦ರಂದು ಬೆಂಗಳೂರಿಗೆ ತೆರಳಿ ಗೃಹ ಸಚಿವರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲ ಪ್ರದೀಪ್ ನಾಯರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News