ಬ್ರಹ್ಮಾವರ: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಲೆ; ಆರೋಪಿ ಪತಿಯ ಬಂಧನ
Update: 2024-08-23 07:01 GMT
ಕೋಟ, ಆ.21: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನು ಪತಿ ಕೊಲೆಗೈದ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ನಡೆದಿರುವ ಬಗ್ಗೆ ಶುಕ್ರವಾರ ವರದಿಯಾಗಿದೆ.
ಕೊಲೆಗೀಡಾದವರನ್ನು ಬೀದರ್ ದೊಣಗಪುರ ಮೂಲದ ಜಯಶ್ರೀ(31) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಆಕೆಯ ಪತಿ ಕಿರಣ್ ಉಪಾಧ್ಯ ಗುಂಡ್ಮಿ(44) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕೊಲೆ ಕೃತ್ಯ ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.
ಕಿರಣ್ ಕಳೆದ ಎರಡು ವರ್ಷಗಳಿಂದ ನರಸಿಂಹ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.