ಉಡುಪಿ: ಬೈರಂಪಳ್ಳಿ ಉಪ ಆರೋಗ್ಯ ಕೇಂದ್ರ ಕಾಮಗಾರಿಗೆ ಗುದ್ದಲಿ ಪೂಜೆ
Update: 2025-03-27 18:42 IST

ಉಡುಪಿ: ಕಾಪು ವಿಧಾನ ಸಭಾ ಕ್ಷೇತ್ರದ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂ. ಅನುದಾನದ ಮಂಜೂರಾಗಿದ್ದು ಇದರ ಕಾಮಗಾಗೆ ಗುದ್ದಲಿ ಪೂಜೆಯನ್ನು ಇಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಮಲ್ಯ, ಉಪಾಧ್ಯಕ್ಷೆ ಅಮ್ಮಣ್ಣಿ ಶೆಟ್ಟಿ, ಸದಸ್ಯರಾದ ಜಿಯಾನಂದ ಹೆಗಡೆ, ಹರ್ಷಿತ ಕುಮಾರ್, ರಾಧಿಕಾ ಭಟ್, ತಾಲೂಕು ಆರೋಗ್ಯಾಧಿಕಾರಿಗಳಾದ ವಾಸುದೇವ್ ಉಪಾಧ್ಯಾಯ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅರ್ಚನಾ ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಉಪಸ್ಥಿತರಿದ್ದರು.