ಅರಸು ನೆನಪಿನಲ್ಲಿ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ ಮುಂದುವರಿಸಿ: ಸಿಎಂಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ

Update: 2023-08-16 15:59 GMT

ಉಡುಪಿ, ಆ.16: ಹಿಂದುಳಿದ ವರ್ಗಗಳ ಜನರಿಗೆ ಹಾಗೂ ಎಲ್ಲಾ ವರ್ಗಗಳ ಬಡವರಿಗೆ ಬದುಕನ್ನು ಕಟ್ಟಿಕೊಟ್ಟ ದಿ.ದೇವರಾಜ ಅರಸು ಜನ್ಮ ದಿನಾಚರಣೆಯನ್ನು ಆ.20ರಂದು ಆಚರಿಸಲಾಗುತ್ತಿದ್ದು, ಹಿಂದಿನ ನಮ್ಮ ಸರಕಾರ ಮಾಡಿದ ಅರಸು ಉತ್ಸವವನ್ನು ಈಗಿನ ಸರಕಾರವೂ ಮುಂದುವರಿ ಸುವಂತೆ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.

ನಮ್ಮ ಸರಕಾರ ಅರಸು ಜನ್ಮದಿನಾಚರಣೆಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ದಿನಗಳ ಉತ್ಸವವಾಗಿ ಆಚರಿಸಿತ್ತು. ದೇವರಾಜ ಅರಸು ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯೊಂದಿಗೆ ಆಯಾ ಜಿಲ್ಲೆಗಳಲ್ಲಿ ಅರಸು ಅವರ ಆದರ್ಶ ಗಳಿಗೆ ಪೂರಕವಾಗಿ ಕೆಲಸ ಮಾಡಿದ ಗಣ್ಯರಿಗೆ ಜಿಲ್ಲಾ ಮಟ್ಟದ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದವರು ವಿವರಿಸಿದ್ದಾರೆ.

ಜಿಲ್ಲೆ ಮತ್ತು ರಾಜ್ಯಗಳಲ್ಲಿ 3 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮವೂ ಸೇರಿದಂತೆ ಅರಸು ಅವರ ಕುರಿತು ಸಾಹಿತ್ಯ, ಕಲೆ, ಜನಪದ ಹಾಗೂ ವಿವಿಧ ಜಾತಿಗಳ ಕುಲಕಸುಬುಗಳ ವಸ್ತುಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿ ಕೊಳ್ಳಲಾಗಿತ್ತು. ಇದರಿಂದ ರಾಜ್ಯದಲ್ಲಿ ಅರಸು ಅಭಿಮಾನಿಗಳಲ್ಲಿ ಸಂಭ್ರಮದ ವಾತಾವರಣ ಉಂಟಾಗಿತ್ತು ಎಂದು ನೆನಪಿಸಿದ್ದಾರೆ.

ಆದ್ದರಿಂದ ಅರಸು ಅವರ ಆಡಳಿತ ಹಾಗೂ ಆದರ್ಶಗಳನ್ನು ಕಣ್ಣಾರೆ ಕಂಡಿರುವ ತಾವು ಸಹ ಹಿಂದಿನ ವರ್ಷದಂತೆ ಮೂರು ದಿನಗಳ ಕಾಲ ಅರಸು ಜನ್ಮದಿನವನ್ನು ಆಚರಿಸುವಂತೆ ಹಾಗೂ ರಾಜ್ಯ ಮಟ್ಟು ಜಿಲ್ಲಾ ಮಟ್ಟದಲ್ಲೂ ಅರಸು ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News