ವಿವಿಧ ಗ್ರಾಮಗಳ ಗ್ರಂಥಾಲಯಗಳಿಗೆ ಸಾಹಿತ್ಯ ಕೃತಿಗಳ ಕೊಡುಗೆ

Update: 2023-11-05 15:11 GMT

ಉಡುಪಿ: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ ಪರ್ಕಳ, ಆತ್ರಾಡಿ ಹಾಗೂ ೮೦ಬಡಗಬೆಟ್ಟು ಗ್ರಾಪಂಗಳ ಸಾರ್ವಜನಿಕ ಗ್ರಂಥಾಲಯಗಳಿಗೆ ವೇದಿಕೆಯ ಬರಹಗಾರರು ಬರೆದಿರುವ ಸಾಹಿತ್ಯ ಕೃತಿಗಳನ್ನು ರವಿವಾರ ಕೊಡುಗೆಯಾಗಿ ನೀಡಲಾಯಿತು.

ವೇದಿಕೆಯ ಸದಸ್ಯರು ಬರಹಗಾರರಾದ ಗೋಪಿ ಹಿರೇಬೆಟ್ಟು ಅವರ ‘ಗೋಪಿ ಲೋಲ ಹೇ ಗೋಪಾಲ’, ‘ಮುಸ್ಸಂಜೆಯ ಪಯಣ’, ‘ಮೊದಲ ಮುತ್ತು’, ವ್ಯಂಗ್ಯ ಲೋಕ, ಶಂಕರ ಕುಲಾಲ ಅವರ ಮಾಲಿಂಗನಾಟ ಮತ್ತು ಇತರ ಕತೆಗಳು, ಮೌನೇಶ ಆಚಾರ್ಯರ ಗಡ್ ಬಡ್ ಜೊತೆಗೆ ಇತರ ಪ್ರಸಿದ್ಧ ಸಾಹಿಗಳ ಪುಸ್ತಕಗಳೊಂದಿಗೆ ಪ್ರತಿಯೊಂದು ಗ್ರಂಥಾಲ ಯಕ್ಕೂ ಸುಮಾರು ೫೦ರಂತೆ ಒಟ್ಟು ೧೫೦ ಪುಸ್ತಕಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪರ್ಕಳ ಗ್ರಂಥಾಲಯದ ಗ್ರಂಥ ಪಾಲಕಿ ನಳಿನಾಕ್ಷೀ, ಆತ್ರಾಡಿ ಗ್ರಂಥಾಲಯದ ಗ್ರಂಥ ಪಾಲಕಿ ವಸುಮತಿ, ಬಡಗಬೆಟ್ಟು ಗ್ರಂಥಾಲಯ ಗ್ರಂಥ ಪಾಲಕಿ ಅಶ್ವಿನಿ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ೮೦ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ ಕೊಟ್ಯಾನ್, ಸದಸ್ಯ ನೋವೆಲ್ ಜೆ. ವಾಸ್ ಭಾಗವಹಿಸಿದ್ದರು.

ವೇದಿಕೆಯ ಅಧ್ಯಕ್ಷ ಸಂದೀಪ್ ನಾಯ್ಕ್ ಕಬ್ಯಾಡಿ, ಗೋಪಿ ಹಿರೇಬೆಟ್ಟು, ಗಣೇಶ್ ಸಣ್ಣಕ್ಕಿಬೆಟ್ಟು, ಅನಂತ ರಾಮ ನಾಯಕ್, ಶಂಕರ ಕುಲಾಲ್, ಗಣೇಶ್ ಕುಲಾಲ್, ಸುಧಾಕರ ನಾಯಕ್, ಗುರುಪ್ರಸಾದ್, ರಾಜೇಶ್ ನಾಯಕ್, ಸಂತೋಷ ತಟ್ಟೂರು, ಶ್ರೀನಿವಾಸ ನಾಯಕ್, ರವಿರಾಜ್ ಆಚಾರ್ಯ, ನಗರ ಸಭಾ ಸಿಬ್ಬಂದಿ ವಿಠ್ಠಲ್ ಸಣ್ಣಕ್ಕಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯದರ್ಶಿ ಅಶೋಕ್ ಸಣ್ಣಕ್ಕಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News