ಸಕ್ರಮೀಕರಣ ಅರ್ಜಿದಾರರಿಂದ ಭೂಮಿಹಕ್ಕಿನ ಹೋರಾಟಕ್ಕೆ ನಿರ್ಧಾರ

Update: 2023-09-03 15:11 GMT

ಉಡುಪಿ : ಅಖಿಲ ಭಾರತ ಕೃಷಿಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೃಷಿಕೂಲಿಕಾರರ ಸಮ್ಮೇಳನವು ಕುಂದಾಪುರ ಕಾರ್ಮಿಕ ಭವನದ ಸಭಾಂಗಣದಲ್ಲಿ ರವಿವಾರ ಜರಗಿತು.

ಸಮಾವೇಶವನ್ನು ಉದ್ಘಾಟಿಸಿದ ಕೂಲಿ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಕೋಣಿ ಮಾತನಾಡಿ, ಜಿಲ್ಲೆಯಾದ್ಯಂತ ಹಲವು ಕುಟುಂಬಗಳು ಸರಕಾರಿ ಜಾಗದಲ್ಲಿ ವಾಸವಾಗಿದ್ದು, ಕೃಷಿ ಅಭಿವೃದ್ಧಿ ಪಡಿಸಿ ಸ್ಥಳ ಸ್ವಾಧೀನತೆ ಹೊಂದಿ ಅಕ್ರಮ ಸಕ್ರಮೀಕರಣ, ೯೪ಸಿ, ೯೪ಸಿಸಿ, ಇನ್ನಿತರ ಅರ್ಜಿ ಸಲ್ಲಿಸಿ ಸರಕಾರಿ ಜಾಗದ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಕೂಡಲೇ ಎಲ್ಲಾ ಕಾನೂನು ತೊಡಕನ್ನು ನಿವಾರಿಸಿ ಸ್ಥಳ ಮಂಜೂರು ಮಾಡಬೇಕು. ಇಲ್ಲವಾದಲ್ಲಿ ಅರ್ಜಿದಾರನ್ನು ಸಂಘಟಿಸಿ ಬೀದಿಗಿಳಿದು ಹೋರಾಟ ಮಾಡಲಾಗವುದು ಎಂದು ಸರಕಾರವನ್ನು ಎಚ್ಚರಿಸಿದರು.

ವೇದಿಕೆಯಲ್ಲಿ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಕವಿರಾಜ್., ಎಸ್.ನಾಗರತ್ನ ನಾಡ, ಶ್ಯಾಮಲ ಗುಜ್ಜಾಡಿ, ಶೀಲಾವತಿ ಹಡವು, ಬೈಂದೂರು ಗ್ರಾಮ ಪಂಚಾಯತ್ ಸದಸ್ಯೆ ಕಮಲ ಸೆಟ್ಟಿಗಾರ್ ಉಪಸ್ಥಿತರಿದ್ದರು. ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಶುಭ ಕೋರಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News