ಸೇನಾಪುರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಧರಣಿ
ಕುಂದಾಪುರ, ಅ.10: ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಧರಣಿಯನ್ನು ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ರಾಜೀವ ಪಡುಕೋಣೆ, ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಪೂರಕ ಅವಕಾಶಗಳಿದ್ದು, ಇಲಾಖೆ ಈ ಬಗ್ಗೆ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕು. ಕೇವಲ ಮೂರು ತಿಂಗಳ ಗಡುವು ನೀಡಲಿದ್ದು ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅವಕಾಶ ನಿರಾಕರಿಸಿದರೆ 25 ಗ್ರಾಮಗಳನ್ನು ಒಳ ಗೊಂಡು ಅನಿರ್ಧಿಷ್ಟಾವಧಿಯ ಅಹೋರಾತ್ರಿ ಮಹಾಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
15 ಗ್ರಾಪಂನಿಂದ ಈಗಾಗಲೇ ನಿರ್ಣಯ ಮಾಡಿ ಕಾರವಾರದ ರೈಲ್ವೆ ವ್ಯವಸ್ಥಾಪಕರಿಗೆ ಕಳುಹಿಸಲಾಗಿದೆ. ಸೇನಾಪುರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಯಾದರೆ 15 ಗ್ರಾಪಂ ವ್ಯಾಪ್ತಿಯ, 24 ಗ್ರಾಮಗಳ ಜನರಿಗೆ ಅನುಕೂಲ ವಾಗಲಿದೆ. ಸೇನಾ ಪುರ ರೈಲು ನಿಲ್ದಾಣ ನಿರ್ಮಾಣವಾಗುವ ಸಂದರ್ಭ ಮೂರು ಟ್ರ್ಯಾಕ್‌ಗಳನ್ನು ಮಾಡಲಾಗಿದ್ದು, ಎಕ್ಸ್‌ಪ್ರೆಸ್ ರೈಲು ನಿಲು ಗಡೆಗೆ ಎಲ್ಲಾ ರೀತಿಯ ವ್ಯವಸ್ಥೆ ಇದೆ. ಆದರೆ ಜನರ ಬೇಡಿಕೆಯ ಕೊರತೆಯಿಂದಾಗಿ ಇಂದು ಎಕ್ಸ್‌ಪ್ರೆಸ್ ರೈಲುಗಳು ನಿಲ್ಲು ತ್ತಿಲ್ಲ ಎಂದು ದೂರಿದರು.
ಸಿಐಟಿಯು ಮುಖಂಡ ಸುರೇಶ ಕಲ್ಲಾಗರ ಮಾತನಾಡಿ, ಸೇನಾಪುರ ಗ್ರಾಮದ ಮಧ್ಯೆ ಹತ್ತಾರು ರೈಲುಗಳು ಓಡಾಡುತ್ತಿ ದ್ದರೂ ಕೂಡ ಸೇನಾಪುರ ಮತ್ತು ಸುತ್ತಮುತ್ತಲಿನ 24 ಗ್ರಾಮಗಳ ಜನರಿಗೆ ಇವತ್ತು ಕೂಡ ರೈಲ್ವೆ ಸೇವೆ ಪಡೆಯಲು ಸಾಧ್ಯವಾಗದಿರುವುದಕ್ಕೆ ರೈಲ್ವೆ ಇಲಾಖೆಯ ಘೋರ ವೈಫಲ್ಯ ಕಾರಣ. ಇಲಾಖೆಯ ವಿರುದ್ದ ನಾವೆಲ್ಲರೂ ಮೌನ ಮುರಿಯ ಬೇಕಾಗಿದೆ. ನಮ್ಮ ಹಕ್ಕನ್ನು ನಾವು ಪಡೆಯಲೇಬೇಕು. ಸೇನಾಪುರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಂತರೆ ಅದರಿಂದ ಪ್ರವಾಸೋ ಧ್ಯಮ ಅಭಿವೃದ್ದಿಯಾಗಲಿದೆ ಎಂದು ತಿಳಿಸಿದರು.
ನಾಡ ಗ್ರಾಪಂರಾದ ಸದಸ್ಯ ಅರವಿಂದ ಪೂಜಾರಿ, ಪಿಲಿಪ್ ಡಿಸಿಲ್ವ, ಕೆಂಚನೂರು ಸೋಮಶೇಖರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕೆನಡಿ ಪಿರೇರಾ, ಸತೀಶ್ ಎಂ.ನಾಯಕ್, ಪತ್ರಕರ್ತ ಜಾನ್ ಡಿಸೋಜ, ನಾಗರತ್ನ ನಾಡ ಮಾತನಾ ಡಿದರು. ಸೇನಾಪುರ ರೈಲ್ವೆ ನಿಲ್ದಾಣದ ಸ್ಟೇಶನ್ ಮಾಸ್ಟರ್ ಸುಕುಮಾರ್ ಶೆಟ್ಟಿ ಮೂಲಕ ಕಾರವಾರದ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಹರ್ಕೂರು ಚಿತ್ತರಂಜನ್ ಶೆಟ್ಟಿ, ಹೊಳ್ಮಗೆ ಸುಭಾಶ್ ಶೆಟ್ಟಿ, ಎಚ್.ನರಸಿಂಹ, ವೆಂಕಟೇಶ್ ಕೋಣಿ, ಅಭಿ ನಂದನ ಶೆಟ್ಟಿ, ಸಂತೋಷ ಹೆಮ್ಮಾಡಿ, ಶೀಲಾವತಿ ಪಡುಕೋಣೆ, ಶ್ರೀಧರ್ ನಾಡ, ಪಾರ್ವತಿ ನಾಡ ಉಪಸ್ಥಿತರಿದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನಾ ಸಭೆಗೂ ಮುನ್ನ ನಾಡ ಗ್ರಾಪಂ ಬಳಿಯಿಂದ ಸೇನಾಪುರ ರೈಲು ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನಡೆಯಿತು.