ನಕಲಿ ಪರವಾನಿಗೆ ಆರೋಪ: ಕ್ರಷರ್ ಮಾಲಕಿ ವಿರುದ್ಧ ಪ್ರಕರಣ
Update: 2024-09-04 15:11 GMT
ಮಣಿಪಾಲ, ಸೆ.೪: ಉಪಖನಿಜ ಸಾಗಾಟಕ್ಕೆ ಸಂಬಂಧಿಸಿ ನಕಲಿ ಪರವಾನಿಗೆ ಬಳಸಿದ ಕ್ರಷರ್ ಮಾಲಕಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.6ರಂದು ವಾಹನವೊಂದರಲ್ಲಿ ಜಿಪಿಎಸ್ ಷರತ್ತು ಉಲ್ಲಂಘನೆ ಮಾಡಿ ಖನಿಜ ಸಾಗಾಟ ಮಾಡುತ್ತಿದ್ದು ಈ ಬಗ್ಗೆ ವಾಹನ ಮಾಲಕ ಸುಂದರ ಎಂಬವರಲ್ಲಿ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹಾಜಿರಾ ಸಜನಿ ವಿಚಾರಿಸಿ ದಾಗ ಉಪ ಖನಿಜ ಸಾಗಾಣಿಕೆಯ ಪರವಾನಿಗೆ ಯನ್ನು ಪಡೆದು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದರು.
ಅದರಂತೆ ಮಣಿಪಾಲ ಪೊಲೀಸರು ಪರವಾನಿಗೆ ಮತ್ತು ಬಾರ್ ಕೋಡ್ ಗಳನ್ನು ಪರಿಶೀಲಿಸಿದಾಗ ಐಎಲ್‌ಎಂಎಸ್ ತಂತ್ರಾಂಶ ದಲ್ಲಿ ಉಪಖನಿಜ ಸಾಗಾಣಿಕಾ ಪರವಾನಿಗೆಗಳನ್ನು ನೀಡಿರುವುದು ಕಂಡುಬಂದಿಲ್ಲ. ಇವುಗಳನ್ನು ಕ್ರಷರ್ ಮಾಲಕಿ ಕೆ.ರಾಧಿಕಾ ಹಿರೇಬೆಟ್ಟು ನಕಲಿ ಮಾಡಿ ಉಪಯೋಗಿಸಿ ರುವುದಾಗಿ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹಾಜಿರಾ ಸಜನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.