ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
Update: 2023-08-23 21:26 IST

ಮಲ್ಪೆ, ಆ.23: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಆ.22ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಭಟ್ಕಳ ಬೆಳ್ಕಳೆ ಹೊನ್ನೆಮಡಿ ನಿವಾಸಿ ಶ್ರೀಧರ ಲಕ್ಷ್ಮಣ ನಾಯ್ಕ(50) ಎಂದು ಗುರುತಿಸಲಾಗಿದೆ. ಇವರು ಆ.15ರಂದು ಯಶರಾಜ ಎಂಬ ಮೀನು ಗಾರಿಕಾ ಬೋಟಿನಲ್ಲಿ ಇತರ ಮೀನುಗಾರರೊಂದಿಗೆ ಮೀನುಗಾರಿಕೆಗೆ ಮಲ್ಪೆ ಬಂದರಿನಿಂದ ಹೊರಟಿದ್ದು, ಸಮುದ್ರದಲ್ಲಿ ಬೋಟಿನಲ್ಲಿ ಬಲೆ ಎಳೆಯುತ್ತಿರು ವಾಗ ಇವರು ಬೋಟಿನಿಂದ ಆಯತಪ್ಪಿನೀರಿಗೆ ಬಿದ್ದು ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.