ಮಹಿಳೆಯ ಮೊಬೈಲ್, ಹಣ ಇದ್ದ ಚೀಲ ಕಳವು: ಪ್ರಕರಣ ದಾಖಲು

Update: 2025-03-22 21:27 IST
ಮಹಿಳೆಯ ಮೊಬೈಲ್, ಹಣ ಇದ್ದ ಚೀಲ ಕಳವು: ಪ್ರಕರಣ ದಾಖಲು
  • whatsapp icon

ಮಲ್ಪೆ, ಮಾ.22: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೊಬೈಲ್, ಪರ್ಸ್‌ಗಳಿದ್ದ ಚೀಲವನ್ನು ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಮಾ.21ರಂದು ಬೆಳಗ್ಗೆ ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆಯಲ್ಲಿ ನಡೆದಿದೆ.

ಬಾಗಲಕೋಟೆ ಮೂಲದ ಸರಸ್ವತಿ(21) ಎಂಬವರು ತನ್ನ ಮಗನೊಂದಿಗೆ ಕೆಳಾರ್ಕಳಬೆಟ್ಟುವಿನ ತನ್ನ ತಾಯಿಯ ಮನೆಯಿಂದ ಹೊರಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಸರಸ್ವತಿ ಕೈಯಲ್ಲಿದ್ದ ಮೊಬೈಲ್ ಹಾಗೂ 2500ರೂ. ಹಣ ಇರುವ ಚೀಲವನ್ನು ಬಲತ್ಕಾರ ವಾಗಿ ಕಸಿದುಕೊಂಡು ಕೆಮ್ಮಣ್ಣು ಕಡೆಗೆ ಹೋಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News