ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
Update: 2023-09-02 12:29 GMT
ಮಲ್ಪೆ: ಬೋಟಿನಿಂದ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ರೊಬ್ಬರು ಮೃತಪಟ್ಟ ಘಟನೆ ಆ.31ರಂದು ತಡರಾತ್ರಿ ವೇಳೆ ನಡೆದಿದೆ.
ಮೃತರನ್ನು ಜಾರ್ಖಂಡ್ ಮೂಲದ ಮನೋಜ್ ಸನ್(32) ಎಂದು ಗುರುತಿಸಲಾಗಿದೆ. ಇವರು ಶಿವಜ್ಯೋತಿ ಬೋಟಿನಲ್ಲಿ ಇತರ ಮೀನುಗಾರರ ಜೊತೆ ಮೀನುಗಾರಿಕೆ ಬಗ್ಗೆ ಮಲ್ಪೆಬಂದರಿನಿಂದ ಹೊರಟಿದ್ದು, ಸುಮಾರು ಎರಡು ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಮನೋಜ್ ಸನ್ ಬೋಟಿನಿಂದ ಕಾಲು ಜಾರಿ ಆಯ ತಪ್ಪಿನೀರಿಗೆ ಬಿದ್ದರು.
ಕೂಡಲೇ ಇವರನ್ನು ಇತರರು ರಕ್ಷಿಸಿ ಉಪಚರಿಸಿದ್ದು, ತೀವ್ರವಾಗಿ ಅಸ್ವಸ್ಥ ಗೊಂಡ ಮನೋಜ್ ಸನ್ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.