ಮಲ್ಪೆ: ಜಾಗದ ರಿಜಿಸ್ಟ್ರೇಶನ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
Update: 2025-03-27 23:31 IST
ಮಲ್ಪೆ: ಜಾಗವನ್ನು ಹೆಸರಿಗೆ ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ ಕಿದಿಯೂರು ಎಂಬವರು ಕಲ್ಮಾಡಿಯ ಸುರೇಶ್ ಮತ್ತು ಅವರ ಹೆಂಡತಿಗೆ ಕಲ್ಮಾಡಿ ಬಂಕೇರಕಟ್ಟ ಎಂಬಲ್ಲಿ ೪ ಸೆಂಟ್ಸ್ ಜಾಗವನ್ನು ಅವರ ಹೆಸರಿಗೆ ಮಾಡಿಕೊಡುವುದಾಗಿ ಹೇಳಿ ಮತ್ತು ಜಾಗದಲ್ಲಿ ಮೆಸ್ಕಾಂ ಕಂಬವನ್ನು ಹಾಕಿಕೊಡುವುದಾಗಿ ಹೇಳಿ ೨,೨೫,೦೦೦ರೂ. ಹಣವನ್ನು ಪಡೆದುಕೊಂಡಿದ್ದರು.
೨೦೨೪ರ ಆಗಸ್ಟ್‌ರಲ್ಲಿ ಜಾಗದ ರಿಜಿಸ್ಟ್ರೆಶನ್ ಮಾಡಿಸಲು ಸ್ವಲ್ಪಹಣದ ಅವಶ್ಯಕತೆಯಿದೆ ಎಂದು ಹೇಳಿ ಸುರೇಶ್ ಅವರ ಹೆಂಡತಿಯ ಚಿನ್ನ ಅಡವಿಟ್ಟು ೧೩೫೦೦೦ರೂ. ಹಣವನ್ನು ಪಡೆದುಕೊಂಡಿದ್ದರು. ಬಳಿಕ ಆರೋಪಿಯು ಜಾಗವನ್ನು ರಿಜಿಸ್ಟ್ರೆಶನ್ ಮಾಡಿಕೊಡದೆ ಹಣವನ್ನು ವಾಪಾಸ್ಸು ಕೊಡದೆ ವಂಚನೆ ಮಾಡಿರುವುದಾಗಿ ದೂರಲಾಗಿದೆ.