ಗಾಂಜಾ ಸೇವನೆ: ಮೂವರು ವಶಕ್ಕೆ
Update: 2023-07-29 15:31 GMT
ಗಂಗೊಳ್ಳಿ, ಜು.29: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಜು.28ರಂದು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತ್ರಾಸಿ ಪ್ರವಾಸಿ ಮಂದಿರದ ಬಳಿ ಗಂಗೊಳ್ಳಿ ಸುಲ್ತಾನ್ ಮೊಹಲ್ಲಾದ ಫಾರುಕ್(30), ತ್ರಾಸಿ ಬೀಚ್ ಪಾರ್ಕ್ ಬಳಿ ಗಂಗೊಳ್ಳಿ ಬಾಬಾಷಾ ಮೊಹಲ್ಲಾದ ಜಾಫರ್ ಸಿದ್ದಿಕ್(32) ಹಾಗೂ ಗಂಗೊಳ್ಳಿ ಬಂದರು ಬಳಿ ಗಂಗೊಳ್ಳಿ ದುರ್ಗಿಕೇರಿ ನಿವಾಸಿ ಫರಾನ್(28) ಎಂಬವರನ್ನು ವಶಕ್ಕೆ ಪಡೆದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಅಲ್ಲಿಂದ ಬಂದ ವರದಿಯಲ್ಲಿ ಇವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.