ಗಾಂಜಾ ಸೇವನೆ: ಮೂವರ ಬಂಧನ
Update: 2023-09-06 14:54 GMT
ಕಾಪು, ಸೆ.6: ಗಾಂಜಾ ಸೇವನೆಗೆ ಸಂಬಂಧಿಸಿ ಉದ್ಯಾವರ ಗ್ರಾಮದ ಅಂಕುದ್ರು ಉಪ್ಪುಗುಡ್ಡೆ ಬಳಿ ಸೆ.4ರಂದು ಮೂವರನ್ನು ಕಾಪು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯರಾದ ಯಶ್ (19), ವಿಜಯ(32), ಸಂತೋಷ(23) ಬಂಧಿತರು. ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿ ಪರೀಕ್ಷಿಸಿದ್ದು, ವರದಿಯಲ್ಲಿ ಇವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.