ಗೃಹಲಕ್ಷ್ಮೀ ಯೋಜನೆ: ಉಡುಪಿ ಜಿಲ್ಲೆಯಲ್ಲಿ ಮೊದಲ ದಿನ 2526 ಮಂದಿಯಿಂದ ನೋಂದಣಿ
ಉಡುಪಿ, ಜು.21: ರಾಜ್ಯದ ಪ್ರತಿಯೊಬ್ಬ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000ರೂ. ಹಾಕುವ ಗೃಹಲಕ್ಷ್ಮೀ ಯೋಜನೆಗೆ ಹೆಸರು ನೊಂದಾಯಿಸುವ ಮೊದಲ ದಿನವಾದ ಗುರುವಾರದಂದು (ಜು.20) ಉಡುಪಿ ಜಿಲ್ಲೆಯಲ್ಲಿ ಒಟ್ಟು 2526 ಮಂದಿಯನ್ನು ನೊಂದಾಯಿಸಿ ಕೊಳ್ಳಲಾಗಿದೆ.
ಸರ್ವರ್ ಸಮಸ್ಯೆಯೂ ಸೇರಿದಂತೆ ಹಲವು ಸಮಸ್ಯೆಗಳಿದ್ದರೂ ಯೋಜನೆಗೆ ನೊಂದಣಿಯ ಮೊದಲ ದಿನದಂದು ಜಿಲ್ಲೆಯಲ್ಲಿ ಒಟ್ಟು 2526 ನೊಂದಾವಣಿಯಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ ತಿಳಿಸಿದೆ. ಇವುಗಳಲ್ಲಿ 1828 ನೊಂದಣಿ ಸೇವಾಸಿಂಧು ಮೂಲಕ ಹಾಗೂ ಉಳಿದ 698 ಇತರ ವಿಧಾನದ ಮೂಲಕ ನಡೆದಿದೆ.
ರಾಜ್ಯದಲ್ಲಿ ಮೊದಲ ದಿನದಂದು ಒಟ್ಟು 60,273 (35856+24417) ನೊಂದಣಿಯಾಗಿದೆ. ಬೆಳಗಾವಿಯಲ್ಲಿ ಅತ್ಯಧಿಕ 4790 ನೊಂದಣಿಯಾದರೆ, ಹಾವೇರಿಯಲ್ಲಿ 4006 ಮಂದಿಯ ಹೆಸರು ಯೋಜನೆಗೆ ನೊಂದಣಿ ಗೊಂಡಿದೆ. ದಕ್ಷಿಣ ಕನ್ನಡದಲ್ಲಿ 3116 (1501+1615), ಉತ್ತರ ಕನ್ನಡದಲ್ಲಿ 1875 (1099+776), ಕೊಡಗಿನಲ್ಲಿ 558(166+392) ಮಂದಿಯ ನೊಂದಣಿಯಾಗಿದೆ.