ಜನಪದ ಸರಣಿ ಕಲಾ ಕಾರ್ಯಾಗಾರ ಉದ್ಘಾಟನೆ
ಉಡುಪಿ, ನ.2: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಬಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ಸ್ಟುಡಿಯೋ ನೆರಳು ಹಾಗೂ ಎಬಿಸಿಡಿ ಡಿಸೈನ್ ಪಂಡಮೆಂಟಲ್ಸ್ ಸಹಯೋಗದಲ್ಲಿ ಜನಪದ ಸರಣಿ ಕಲಾ ಕಾರ್ಯಾಗಾರದ ಎಂಟನೇ ಆವೃತ್ತಿಯನ್ನು ಗುರುವಾರ ಬಡಗುಪೇಟೆಯ ಗ್ಯಾಲರಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಸ್ಟುಡಿಯೋ ನೆರಳು ಆರ್ಕಿಟೆಕ್ಟ್ ಸಂಪ್ರೀತ್ ರಾವ್ ಮಾತನಾಡಿ, ಭಾರತೀಯ ಕಲಾ ಪ್ರಕಾರಗಳೆಲ್ಲ ಬಹಳ ವಿಶಿಷ್ಟತೆಯಿಂದ ಕೂಡಿದೆ. ಇವುಗಳ ಹಿಂದಿರುವ ಜ್ಞಾನವನ್ನು ಈ ತೆರನಾದ ಕಾರ್ಯಾಗಾರಗಳ ಮೂಲಕ ಉಡುಪಿಯ ಪರಿಸರದಲ್ಲಿ ನಡೆಸಿಕೊಡುತ್ತಿರುವ ಭಾವನಾ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಉಡುಪಿ ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕ ಡಾ.ನಿರಂಜನ್ ಯು.ಸಿ. ಮಾತನಾಡಿ, ಶಾಲಾ ಮಕ್ಕಳಿಗೆ ದೇಸೀಯ ಕಲಾಪ್ರಕಾರಗಳನ್ನು ಕಲಿಯಲು ಇದೊಂದು ಉತ್ತಮ ಅವಕಾಶ. ಈ ಮೂಲಕ ಕಲಾ ಪರಂಪರೆಯ ಹಿಂದಿರುವ ಜ್ಞಾನವನ್ನು ಅರಿತುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮಹಾರಾಷ್ಟ್ರದ ವಾರ್ಲಿಕಲೆಯಲ್ಲಿನ ವಿಶಿಷ್ಟ ಶೈಲಿಗಳಾದ ನಯಾಧಾನ್ ಹಾಗೂ ಚೌಕ್ ಚಿತ್ರಗಳನ್ನು ಕಲಿಸಿಕೊಡಲು ಬಂದಿರುವ ವಾರ್ಲಿ ಬುಡಕಟ್ಟು ಕಲಾವಿದೆಯರಾದ ಮೀನಾಕ್ಷಿ ವಾಸುದೇವ್ ವಾಯೆಡಾ ಹಾಗೂ ನಳಿನಿ ರಾಮಚಂದ್ರ ಕಲ್ಲಂಗಡರವರು ಕಲೆಯ ವೈಶಿಷ್ಟ್ಯತೆ ಯನ್ನು ತಿಳಿಸಿದರು.
ಭಾವನಾ ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜುನಾಥ ರಾವ್, ಸಂಯೋಜಕ ಡಾ.ಜನಾರ್ದನ ಹಾವಂಜೆ ಉಪಸ್ಥಿತರಿ ದ್ದರು. ಕಾರ್ಯಾಗಾರ ಗಳು ನ.5ರವರೆಗೆ ಬೆಳಿಗ್ಗೆ 9:30ರಿಂದ ಸಂಜೆ 5ರ ತನಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ9845650544ನ್ನು ಸಂಪರ್ಕಿಸಬಹುದು.